Kannada NewsKarnataka NewsLatest

ಟೇಲರ್ ಗಳಿಗೂ ಆರ್ಥಿಕ ನೆರವು ನೀಡಿ – ಮನವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಟೇಲರ್ ಗಳಿಗೂ ಆರ್ಥಿಕ ನೆರವು ನೀಡಬೇಕು ಎಂದು ಟೈಲರ್ಸ್  ಅಸೋಸಿಯೇಶನ್ ಮನವಿ ಮಾಡಿದೆ.

ಅಸೋಸಿಯೇಶನ್ ರಾಜ್ಯ ಪದಾಧಿಕಾರಿ ಕೃಷ್ಣ ಭಟ್ ನೇತೃತ್ವದಲ್ಲಿ ಇಂದು ಬೆಳಗಾವಿಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ಶಾಸಕ ಅನೀಲ ಬೆನಕೆ ಅರಿಗೆ ಮನವಿ ಸಲ್ಲಿಸಲಾಯಿತು.

Home add -Advt

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಕಷ್ಟದಲ್ಲಿರುವ ಹಲವಾರು ಶ್ರಮಿಕ ವರ್ಗಗಳಿಗೆ ನೆರವು ನೀಡಿದ್ದಾರೆ. ಅವರ ಕಾರ್ಯ ಶ್ಲಾಘನೀಯವಾಗಿದೆ. ಆದರೆ ಅದೇ ರೀತಿಯಲ್ಲಿ ಸಂಕಷ್ಟಕ್ಕೀಡಾಗಿರುವ ಟೈಲರ್ ಗಳನ್ನು ಅದರಲ್ಲಿ ಸೇರಿಸಿಲ್ಲ. ಕೊರೋನಾದಿಂದಾಗಿ ಟೈಲರ್ ಗಳೂ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕುಟುಂಬ ನಿರ್ವಹಣೆಯೂ ಕಷ್ಟವಾಗುವ ಪರಿಸ್ಥಿತಿ ಇದೆ. ಹಾಗಾಗಿ ಅವರಿಗೂ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Related Articles

Back to top button