Kannada NewsKarnataka NewsLatest

ಕೆಪಿಸಿಸಿಯಿಂದ ಲಕ್ಷ್ಮಿ ಹೆಬ್ಬಾಳಕರ್ ಶ್ಲಾಘನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು/ ಬೆಳಗಾವಿ – ದಾರಿತಪ್ಪಿ ಬೆಳಗಾವಿಗೆ ಬಂದಿರುವ ಉತ್ತರ ಭಾರತದ ವಿವಿಧ ರಾಜ್ಯಗಳ ಕಾರ್ಮಿಕರಿಗೆ ಬೆಳಗಾವಿಯಲ್ಲಿ ಧೈರ್ಯ ತುಂಬಿ, ಅವರದ್ದೇ ಪದ್ಧತಿಯ ಆಹಾರ ಪದಾರ್ಥ ಸಿದ್ಧಪಡಿಸಿಕೊಟ್ಟ ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ, ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶ್ಲಾಘಿಸಿದೆ.

Home add -Advt

ಸಂಕಷ್ಟದಲ್ಲಿರುವವರ ನೆರವಿಗೆ ಕಾಂಗ್ರೆಸ್ ಧಾವಿಸಿದೆ ಎಂದು ಟ್ವೀಟರ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಕೆಪಿಸಿಸಿ, ಲಕ್ಷ್ಮಿ ಹೆಬ್ಬಾಳಕರ್ ಅವರ ಸಾಂದರ್ಭಿಕ ನೆರವನ್ನು ಪ್ರಶಂಸಿಸಿದೆ.

 

ಈ ಮಧ್ಯೆ ಲಕ್ಷ್ಮಿ ಹೆಬ್ಬಾಳಕರ್ ಕೂಡ ನಿನ್ನೆಯ ಘಟನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

“ಹೊರ ರಾಜ್ಯಗಳ (ರಾಜಸ್ಥಾನ, ಬಿಹಾರ್, ಉತ್ತರ ಪ್ರದೇಶ) ಕಾರ್ಮಿಕ ಜನರು ಬೆಂಗಳೂರಿನ ಮೂಲಕ ತಮ್ಮ ರಾಜ್ಯಗಳಿಗೆ ಹಿಂದಿರುಗಿ ಹೋಗಬೇಕಾದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಳಗಾವಿಗೆ ಬಂದಿಳಿದಿದ್ದಾರೆ, ನಿನ್ನೆಯ ದಿನ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿ, ಅವರ ಇಷ್ಟದ ಆಹಾರದ ಶೈಲಿಯಂತೆ ನಿನ್ನೆಯ ರಾತ್ರಿ ರೋಟಿ, ದಾಲ್, ರೈಸ್ ನ್ನು ಪೂರೈಕೆ ಮಾಡಿ ಅವರ ಹಸಿವನ್ನು ನೀಗಿಸುವ ಕೆಲಸ ಮಾಡಿದ್ದೇನೆ”
“ಈ ಹೊಟ್ಟೆಯ ಹಸಿವಿನ ಎದುರುಗಡೆ ಯಾವ ಶ್ರೀಮಂತಿಕೆಯೂ ಇಲ್ಲ, ಯಾವ ಮಡಿವಂತಿಕೆಯು ಇಲ್ಲ ಎನ್ನುವ ಮಾತಿದೆ, ಈ ಕಾರ್ಮಿಕ ಜನರು ನಿನ್ನೆಯ ದಿನ ತಮ್ಮ ಅಹವಾಲುಗಳನ್ನು ತೋಡಿಕೊಳ್ಳವ ಸಂದರ್ಭ ನೋಡಿದರೆ ಎಂತವರ ಕರುಳು ಕೂಡ ಕಿತ್ತು ಬರೋ ತರ ಇತ್ತು, ಊಟ ಪೂರೈಕೆಯ ಸಂದರ್ಭದಲ್ಲಿ ಈ ಜನರು ತಮ್ಮ ಪ್ರೀತಿಭರಿತ ವಾತ್ಸಲ್ಯವನ್ನು ವ್ಯಕ್ತಪಡಿಸುತ್ತಿದ್ದಾಗ ನಿಜಕ್ಕೂ ಕಣ್ಣು, ಮನಸ್ಸು ತುಂಬಿ ಬರುವುದರೊಂದಿಗೆ ಈ ಭೂಮಿ ಮೇಲೆ ಹುಟ್ಟಿದಕ್ಕೆ ಸಾರ್ಥಕವಾಯಿತು ಅನ್ನೋ ತರ ಭಾಸವಾಗುತ್ತಿತ್ತು. ಏನೇ ಆಗಲಿ ಸರ್ವೇಜನ ಸುಖಿನೋ ಭವಂತು ಅನ್ನುವ ಮಂತ್ರದೊಂದಿಗೆ ನಿಮ್ಮ ಮನೆ ಮಗಳು ಲಕ್ಷ್ಮೀ ಹೆಬ್ಬಾಳಕರ” ಎಂದು ಅವರು ತಿಳಿಸಿದ್ದಾರೆ.
ಲಕ್ಷ್ಮಿ ಹೆಬ್ಬಾಳಕರ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Related Articles

Back to top button