Latest

ಬೆಳಗಾವಿ ಬಳಿ ಮನೆ ಕಳ್ಳತನ, 3.5 ಲಕ್ಷ ರೂ. ನಗ, ನಗದು ಕಳುವು

 

  ಪ್ರಗತಿವಾಹಿನಿ ಸುದ್ದಿ, ಅಗಸಗಿ

ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ನಿವಾಸಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪನ್ಯಾಸಕ ಸಂತೋಷ ಪಾಟೀಲ ಮನೆಗೆ ಗುರುವಾರ ಮುಂಜಾನೆ 4.30ಕ್ಕೆ ನುಗ್ಗಿದ ಕಳ್ಳರು  ಬೀಗ ಮುರಿದು  ಮನೆಯಲ್ಲಿದ್ದ 2 ಲಕ್ಷ ರೂ. ನಗದು , ಚಿನ್ನ ,ಬೆಳ್ಳಿ ಮತ್ತು  ಬೆಲೆಬಾಳುವ ಸಾಮಾನುಗಳು ಸೇರಿ ಅಂದಾಜು 3.50 ಲಕ್ಷ ಮೌಲ್ಯದ ಕಳ್ಳತನ ಮಾಡಿದ್ದಾರೆ.

ಕಾಕತಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಸಿ ಪಿ ಐ ಶ್ರೀಶೈಲ ಕೌಜಲಗಿ, ಪಿ ಎಸ್ ಐ ಅರ್ಜುನ ಹಂಚಿನಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರು ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. 4 ಜನ ಕಳ್ಳರಲ್ಲಿ ಇಬ್ಬರ ಮುಖ ಪತ್ತೆಯಾಗಿದ್ದು, ಸೆರೆ ಹಿಡಿಯುವುದಾಗಿ ಪೊಲೀಸರು ತಿಳಿಸಿದರು . ಇದೆ ಸಮಯದಲ್ಲಿ ಕಳ್ಳರು ಅದೆ ಗ್ರಾಮದ ಇನ್ನೂ  5 ಸಣ್ಣ ಪುಟ್ಟ ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಆದರೆ ಪ್ರಕರಣ ದಾಖಲಾಗಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button