Latest

ಬೆಳಗಾವಿಯಲ್ಲಿ ಶನಿವಾರದಿಂದ 4 ದಿನ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
9ನೇ  ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ-  ಜ.19ರಿಂದ ನಾಲ್ಕು ದಿನಗಳ ಕಾಲಬೆಳಗಾವಿಯ ಬಿ.ಎಸ್.ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯ ವಿಶಾಲ ಜಾಗದಲ್ಲಿ ನಡೆಯಲಿದೆ.
ಅಂತಾರಾಷ್ಟ್ರೀಯ  ಗಾಳಿ ಪಟ ಉತ್ಸವಕ್ಕೆ ಮಾಲಿನಿ ಸಿಟಿಯ ವಿಶಾಲ ಜಾಗೆಯನ್ನು ಸಜ್ಜು ಗೊಳಿಸಲಾಗಿದೆ. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿರುವ ಈ ಬಾರಿಯ ಉತ್ಸವದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ 20 ಜನ ವಿದೇಶಿಯರು ಹಾಗೂ
21 ಜನ ಭಾರತದ ವಿವಿಧ ರಾಜ್ಯಗಳಿಂದ ಪತಂಗ ಹಾರಿಸುವ ಪರಿಣಿತರು ಆಗಮಿಸಲಿದ್ದಾರೆ. 
ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಹಿನ್ನೆಲೆಯಲ್ಲಿ 40 ಮಳಿಗೆಗಳನ್ನು ಸ್ಥಾಪಿಸಲಾಗಿದೆ. 25 ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಆಸ್ಟ್ರೇಲಿಯಾ, ಬೆಲ್ಜಿಯಂ, ಕೆನಡಾ, ಸಿಂಗಾಪುರ, ಟರ್ಕಿ, ಮಲೇಷ್ಯಾ, ಜರ್ಮನಿ, ಅಮೆರಿಕ, ಇಟಲಿ, ರಶಿಯನ್ ಫೆಡರೇಷನ್‌ನ ಅಂತಾರಾಷ್ಟ್ರೀಯ ಗಾಳಿಪಟ ಹಾರಿಸುವ ಪರಿಣಿತರು ಆಗಮಿಸುವರು ಎಂದು ಗಾಳಿ ಪಟ ಉತ್ಸವದ ರೂವಾರಿ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button