ಪ್ರಗತಿವಾಹಿನಿ ಸುದ್ದಿ, ಗೋಕಾಕ
ತಾಲೂಕಿನ ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಕಲ್ಯಾಣ ಮಂಟಪದಲ್ಲಿ ಸ್ವಾಮಿ ವಿವೇಕಾನಂದರ 156ನೇ ಜಯಂತಿ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಸ್ವಾಮಿ ವಿವೇಕಾನಂದ ಯುವಜನಾಸೇವಾ ಸಂಸ್ಥೆಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗ್ರಾಮದ ಯುವಕರೆಲ್ಲ ಸೇರಿ, ಸಾಧಕರನ್ನು, ಮಾಜಿ ಸೈನಿಕರನ್ನು, ಸಮಾಜ ಸೇವಕರನ್ನು ಸನ್ಮಾನಿಸುವ ಈ ಕಾರ್ಯಕ್ರಮ ಕೇವಲ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮವಾಗದೆ ಒಂದು ಅರ್ಥ ಪೂರ್ಣವಾದ ಕಾರ್ಯಕ್ರಮವಾಗಿದೆ ಎಂದರು.
ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ವಿಭಾಗ ಪ್ರಭಾರಿ ಈರಣ್ಣಾ ಕಡಾಡಿ, ಈ ಸಮಾರಂಭ ದೇಶದ ಸಂಸ್ಕೃತಿ, ಸಂಸ್ಕಾರ, ಧರ್ಮವನ್ನು ಗ್ರಾಮೀಣ ಮಟ್ಟದಲ್ಲಿ ಉಳಿಸುವಲ್ಲಿಸಹಕಾರಿಯಾಗಿದೆ ಎಂದರು.
ಬಸವರಾಜ ಹಿರೇಮಠ ಮಾತನಾಡುತ್ತ, ವಿಶ್ವವವೇ ನಮ್ಮ ದೇಶವನ್ನು ಗುರುವಿನ ಸ್ಥಾನದಲ್ಲಿ ಸ್ವೀಕರಿಸಿದೆ. ನಮ್ಮನ್ನು ತಿರಸ್ಕರಿಸುತ್ತಿದ್ದ ದೇಶಗಳು ರತ್ನ ಗಂಬಳಿ ಹಾಸಿ ನಮ್ಮನ್ನು ಕರೆಯುತ್ತಿವೆ. ಹಾಗಾಗಿ ನಮ್ಮ ಮಕ್ಕಳಲ್ಲಿ ಸ್ವಾಮಿ ವಿವೇಕಾನಂದರ ಆದರ್ಶವನ್ನು ಬೆಳೆಸಬೇಕು ಎಂದು ಹೇಳಿದರು.
ಬಾಳಪ್ಪಾ ಕೊಳವಿ, ಸಾತಪ್ಪಾ ಕೊಳದುರ್ಗಿ, ಕಲ್ಲಪ್ಪಾ ಉಪ್ಪಾರ, ರಾಮನ್ನಾ ಗಂಗನ್ನವರ, ಅಪ್ಪಯ್ಯಾ ಭಕ್ತಾರಗೋಳ, ಶಂಕರೆಪ್ಪಾ ಘಾಡವಿ, ಗುರುರಾಜ ಪೂಜಾರಿ, ಸುರೇಶ ಗೋಂದಿ, ಕೇಂಚಪ್ಪಾ ಶಿಂತ್ರೆ, ಲಕ್ಷ್ಮಣ ನರಗುಂದ, ಕಲ್ಲಪ್ಪಾ ಮಳಲಿ, ದೇವರಮನಿ, ವೀರುಪಾಕ್ಷಯ್ಯಾ ಮಠಪತಿ, ಈಶ್ವರ ಘಡವಿ, ಶ್ರೀಕಾಂತ ಗೋಡೊಡಗಿ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ