
ಪ್ರಗತಿವಾಹಿನಿ ಸುದ್ದಿ; ಕಾರ್ಕಳ: ಹೋಂ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಮಗನನ್ನೂ ಬಿಟ್ಟು ತನ್ನ ಪ್ರಿಯತಮನ ಜತೆ ಪರಾರಿಯಾಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.
ಅಜೆಕಾರು ಕೈಕಂಬ ನಿವಾಸಿ ಮುನ್ಶಿರಾ ಪರಾರಿಯಾದ ಮಹಿಳೆ. ಮುನ್ಶಿರಾ ಮದುವೆಗೆಂದು ಮಂಗಳೂರಿಗೆ ಹೋಗಿದ್ದಳು. ಈ ಮಹಿಳೆ, ತಾಯಿ ಮತ್ತು ಸಹೋದರನ ಜೊತೆ ಹೋಂ ಕ್ವಾರಂಟೈನ್ ಆಗಿದ್ದಳು. ಹೋಂ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದಂತೆ ತನ್ನ ಹಳೆಯ ಪ್ರಿಯಕರನ ಜೊತೆ ಮಹಿಳೆ ಪರಾರಿಯಾಗಿದ್ದಾಳೆ.
ಮಹಿಳೆ 8 ವರ್ಷದ ಹಿಂದೆ ಉದ್ಯಾವರದ ವ್ಯಕ್ತಿ ಜೊತೆ ಮದುವೆಯಾಗಿ ಪುಣೆಯ ಲೋನಾವಲದಲ್ಲಿ ನೆಲೆಸಿದ್ದಳು. ಕೌಟುಂಬಿಕ ಸಮಸ್ಯೆಯಿಂದ ಆಕೆ ತನ್ನ 8 ವರ್ಷದ ಮಗನೊಂದಿಗೆ ಊರಿಗೆ ಬಂದು ಹೆತ್ತವರೊಂದಿಗೆ ವಾಸವಾಗಿದ್ದಳು.
ಮದುವೆ ಕಾರ್ಯಕ್ರಮಕ್ಕೆ ಬಂದು ಹೋಂ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದಂತೆ ನಾಪತ್ತೆಯಾಗಿದ್ದಳು. ಅಜೆಕಾರು ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ ಇದೀಗ ಆಕೆ ಪತ್ತೆಯಾಗಿದ್ದು, ಆಕೆಯನ್ನು ಪೋಷಕರ ಜೊತೆಗೆ ಕಳುಹಿಸಲಾಗಿದೆ.