ಮಹಾಂತೇಶ ಮ. ಕವಟಗಿಮಠ
ಭಾರತದ ಅಚ್ಚೇ ದಿನ್ ಆರಂಭದ ಹರಿಕಾರ ನರೇಂದ್ರ ದಾಮೋದರ್‌ದಾಸ್ ಮೋದಿಯವರು ಭಾರತವೆಂಬ ಬೃಹತ್ ಪ್ರಜಾ ಪ್ರಭುತ್ವದ ಹಡಗಿನ ಚುಕ್ಕಾಣೆ ಹಿಡಿದು ಇಂದಿಗೆ ಆರು ಅರ್ಥಪೂರ್ಣ ವರ್ಷಗಳು ಸಂದಿವೆ.
ಭಾರತ ದೇಶದಲ್ಲಿ ಹಲವಾರು ದಶಕಗಳಿಂದ ಕೋಮು ದಳ್ಳುರಿ, ಅಸಹಿಷ್ಣುತೆ, ಅಸಮಾನತೆ, ಗಲಭೆ ಕೋಲಾಹಲಗಳು ತುಂಬಿದ್ದ ಹಾಗೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ದೇಶದಲ್ಲಿ ಉಗ್ರರ ಓಕುಳಿ, ರಕ್ತಪಾತದ ಭಯೋತ್ಪಾದನೆ ಸ್ಥಿತಿ ಇದ್ದ, ದೇಶದ ಉದ್ದಗಲಕ್ಕೂ ಭ್ರಷ್ಟಾಚಾರವೇ ತಾಂಡವವಾಡುತ್ತಿದ್ದ ಸಮಯದಲ್ಲಿ ಈ ದೇಶದ ಜನತೆ ಹೊಸ ನಾಯಕತ್ವನ್ನು ಕಂಡುಕೊಂಡಿದ್ದು ನರೇಂದ್ರ ಮೋದಿಯವರಲ್ಲಿ.
೨೦೧೪ರ ಲೋಕಸಭಾ ಚುನಾವಣೆ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಹೊಸ ಮನ್ವಂತರಕ್ಕೆ ಸಾಕ್ಷಿಯಾಯಿತು. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದರು. ದೇಶದ ಪ್ರಧಾನಿಯಾಗಿ ಪ್ರಪ್ರಥಮ ಬಾರಿಗೆ ಸಂಸತ್ತನ್ನು ಪ್ರವೇಶಿಸುವ ಸಂದರ್ಭದಲ್ಲಿ ಪಾರ್ಲಿಮೆಂಟಿಗೆ ಇದು ಪ್ರಜಾಪ್ರಭುತ್ವದ ದೇಗುಲವೆಂದು ಹೇಳಿ ಮೆಟ್ಟಿಲುಗಳಿಗೆ ನಮಸ್ಕರಿಸಿ ನಾನು ಪ್ರಧಾನಿಯಲ್ಲ, ಈ ದೇಶದ ಪ್ರಧಾನ ಸೇವಕ ಎಂದು ಹೇಳಿದ ಕಾಯಕಯೋಗಿ.
ದೇಶದಲ್ಲಿ ಪ್ರತಿಯೊಬ್ಬ ರಾಜಕಾರಣಿಯೂ ತಾನು ಈ ದೇಶದ ಸೇವಕ ಎನ್ನುವ ರೀತಿಯಲ್ಲಿ ತಾನು ಸೇವಕನಾಗಬೇಕೆನ್ನತಕ್ಕಂತಹ ಸಂದೇಶವನ್ನು ಇಡೀ ದೇಶಕ್ಕೆ ನೀಡಿದರು. ಇಂತಹ ಒಬ್ಬ ನಾಯಕನ ಆರು ವರ್ಷಗಳ ಸಾಧನೆ ಇಡೀ ವಿಶ್ವವೇ ಕಣ್ತೆರೆದು ನೋಡುವಂತಾಗಿದೆ. ಪ್ರಶಂಸೆಗಳು ಹರಿದು ಬರುತ್ತಿವೆ. ಇಂತಹ ನಿಸ್ವಾರ್ಥ ಸದಾ ಪ್ರಜಾ ಶ್ರೇಯೋಭಿಲಾಷೆ ಧೀಮಂತ ನಾಯಕ ಪ್ರಧಾನಿಯವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಕಳೆದ ೬ ವರ್ಷಗಳ ನರೇಂದ್ರ ಮೋದಿಯವರ ಸರ್ಕಾರದ ಭ್ರಷ್ಟಾಚಾರ ರಹಿತ ಸ್ವಚ್ಚ ಆಡಳಿತದ ಸಾಧನೆಗಳು ಈ ಕೆಳಗಿನಂತಿವೆ.
ದೇಶದಲ್ಲಿ ಪ್ರಮುಖವಾಗಿ ಕೋಮು ಸೌಹಾರ್ದತೆ ಕಾಪಾಡುವ ದೃಷ್ಟಿಯಲ್ಲಿ ಮೋದಿಯವರು ಪ್ರಮುಖ ಸಾಧನೆ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಕೋಮುಗಲಭೆಗಳೇ ಸಂಭವಿಸಿಲ್ಲ.
ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವಲ್ಲಿ ತ್ರಿವಳಿ ತಲಾಖ್ ಕಾನೂನನ್ನು ತರುವ ಮೂಲಕ ಮುಸ್ಲಿಂ ಮಹಿಳೆಯರ ಸಬಲೀಕರಣದತ್ತ ಪ್ರಮುಖ ಹೆಜ್ಜೆ ಇಟ್ಟು ಯಶಸ್ವಿಯಾಗಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಉಗ್ರರ ಹುಟ್ಟಡಗಿಸಿ, ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕುತ್ತಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನ ೩೭೦ನೇ ವಿಧಿಯನ್ನು ರದ್ದುಗೊಳಿಸಿ, ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿಸಿದ್ದಾರೆ
ಕಾಶ್ಮೀರದಲ್ಲಿ ಆಸ್ತಿ ಹಕ್ಕನ್ನು ಮಿತಿಗೊಳಿಸುವ ಸಂವಿಧಾನದ ೩೫೦ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರದಲ್ಲಿ ಎಲ್ಲರೂ ಆಸ್ತಿ ಹಕ್ಕು ಹೊಂದುವಂತೆ ಕಾಶ್ಮೀರದ ಸರ್ವತೋಮುಖ ಅಭಿವೃದ್ದಿಗೆ ಮುನ್ನುಡಿ ಬರೆದಿದ್ದಾರೆ.
ರೈತನೇ ಮೊದಲು ಎಂಬ ಧ್ಯೇಯಕ್ಕೆ ಬದ್ದರಾಗಿ ಈಗಿನ ಸರ್ಕಾರದ
ಮೊದಲ ಆಯವ್ಯಯದಲ್ಲಿ ರೈತರ ಅಭಿವೃದ್ದಿಗೆ ಪ್ರಧಾನಮಂತ್ರಿ ಕಿಸಾನ್
ಸನ್ಮಾನ್ ಯೋಜನೆ ಜಾರಿಗೆತಂದಿದ್ದಾರೆ.
ರೈತರ ಮಣ್ಣಿನ ಆರೋಗ್ಯ ಕಾರ್ಡ್‌ನಿಂದ ಹಿಡಿದು ಉತ್ಪನ್ನಗಳ ಮಾರುಕಟ್ಟೆವರೆಗೆ ರೈತರ ಹಿತಕಾಯುವ ಯೋಜನೆಗಳನ್ನು ರೂಪಿಸಿದ್ದಾರೆ.
ಹೊಸದಾಗಿ ಜಲಶಕ್ತಿ ಸಚಿವಾಲಯ ರೂಪಿಸಿ ಆ ಮೂಲಕ ಅತ್ಯಮೂಲ್ಯ ನೀರಿನ ನಿರ್ವಹಣೆಗೆ ವಿಶೇಷ ಆದ್ಯತೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಇತಿಹಾಸದಲ್ಲಿಯೇ ಅತಿಹೆಚ್ಚು ಅಂದರೆ ೨೦೧೯-೨೦ನೇ ಸಾಲಿನಲ್ಲಿ ೩೯೭೯ ಕಿ.ಮೀ. ರಸ್ತೆಯನ್ನು ನಿರ್ಮಿಸಿದ ದಾಖಲೆ ಮಾಡಿದ್ದಾರೆ.
ತಮ್ಮ ರಾಜತಾಂತ್ರಿಕ ನೆಡೆಯಿಂದ ಭಾರತವು ಇಡೀ ಪ್ರಪಂಚದ ಅಚ್ಚುಮೆಚ್ಚಿನ ರಾಷ್ಟ್ರವಾಗಿ ಗುರುತಿಸುವಂತಾಗಿದೆ. ಇದರಿಂದ ಪ್ರಪಂಚದಲ್ಲಿಯೇ ಭಾರತದ ಬಗೆಗಿನ ದೃಷ್ಟಿಕೋನ ಬದಲಾಗುವಂತಾಗಿ, ಭಾರತ ಅಭಿವೃದ್ದಿಯದಾಪುಗಾಲು ಹಾಕುತ್ತಿದೆ.
ಕೋವಿಡ್-೧೯ ವೈರಾಣುವಿನ ಹರಡುವಿಕೆ ನಿರ್ವಹಣೆಯಲ್ಲಿ ಇಡೀ ಪ್ರಪಂಚದಲ್ಲಿಯೇ ಭಾರತವೇ ನಂ. ೧, ಅದರಲ್ಲಿ ಮೋದಿಯವರು ಇಡೀ ವಿಶ್ವದ ಅಚ್ಚುಮೆಚ್ಚಿನ ನಾಯಕ.
ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿಣಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ೧೯೪ ಸದಸ್ಯ ರಾಷ್ಟ್ರ್ರಗಳು ಭಾರತದ ಆರೋಗ್ಯ ಮಂತ್ರಿ ಹರ್ಷವರ್ಧನ್ ಅವರನ್ನು ಕಾರ್ಯಕಾರಿಣಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಭಾರತದ ಬಗೆಗಿನ ಗೌರವ ಭಾವನೆಯನ್ನು ಸೂಚಿಸುತ್ತದೆ.
ಆಯುಷ್ಮಾನ್ ಭಾರತದಡಿ ಪ್ರಪಂಚದಲ್ಲಿಯೇ ಅತೀ ಹೆಚ್ಚು ಅಂದರೆ ರೂ.೫,೦೦,೦೦೦ ವರಗೆ ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ಉಚಿತ ಚಿಕಿತ್ಸೆ.
ಮೇಕ್‌ಇನ್ ಇಂಡಿಯಾ ಮೂಲಕ ಸ್ವದೇಶಿ ಭಾವನೆಯನ್ನು ಬಿತ್ತಿ, ಸ್ವಾವಲಂಬನೆಯತ್ತ ಭಾರತವನ್ನು ಕೊಂಡೊಯ್ಯುವ ಸಂಕಲ್ಪ
ಮುದ್ರಾ ಯೋಜನೆ ಜಾರಿಗೊಳಿಸಿದ್ದು
ಸ್ವಾತಂತ್ರ್ಯ ನಂತರ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕರಿಂದ ಸುಮಾರು ೬೦,೦೦೦ ಸಾವಿರ ಅಹವಾಲುಗಳನ್ನು ಮಂಕಿ ಬಾತ್ ಮೂಲಕ ಸ್ವೀಕಾರ.
ಸ್ವಚ್ಚಭಾರತ ಮಿಷನ್ ಮೂಲಕ ಕ್ಲೀನ್ ಇಂಡಿಯಾ ಮಾಡಲು ಪ್ರತಿಯೊಂದು ಮನೆಗೂ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಬಯಲು ಮುಕ್ತ ಭಾರತ ನಿರ್ಮಾಣ ಇತ್ಯಾದಿ ಇತ್ಯಾದಿ.
(ಲೇಖಕರು -ವಿಧಾನಪರಿಷತ್ ಸರ್ಕಾರಿ ಮುಖ್ಯ ಸಚೇತಕರು, ವಿಧಾನ ಪರಿಷತ್ ಸದಸ್ಯರು
ಸ್ಥಳೀಯ ಸಂಸ್ಥೆಗಳ ಕ್ಷೇತ್ರ, ಬೆಳಗಾವಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ