Latest

ಲಾಕ್ ಡೌನ್ 5.0ಗೆ ಹೊಸ ಮಾರ್ಗಸೂಚಿ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದಿಗೆ ಲಾಕ್ ಡೌನ್ 4.0 ಮುಕ್ತಾಯವಾಗಿದ್ದು, ನಾಲೆ ಜೂನ್ 1ರಿಂದ ಲಾಕ್ ಡೌನ್ 5.0 ಜಾರಿಗೆ ಬರಲಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.

ನಾಳೆಯಿಂದ 5ನೇ ಹಂತದ ಲಾಕ್ ಡೌನ್ ಜಾರಿಗೆ ಬರಲಿದ್ದು, ಈ ಹಿನ್ನಲೆಯಲ್ಲಿ ಕೇಂದ್ರದ ಮಾರ್ಗಸೂಚಿಯನ್ನೇ ಯಥಾವತ್ತಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ. ಜೂನ್ 8 ರಿಂದ ದೇವಾಲಯಗಳು, ಮಸೀದಿ, ಚರ್ಚ್,ಮಾಲ್ ಗಳು ತೆರೆಯಲು ಅವಕಾಶ ನೀಡಲಾಗಿದ್ದು, ಆದರೆ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಜೂನ್ ಅಂತ್ಯದವರೆಗೂ ಶಾಲಾ-ಕಾಲೇಜುಗಳನ್ನು ಆರಂಭಗೊಳಿಸುವಂತಿಲ್ಲ. ಪೋಷಕರ ಜತೆ ಚರ್ಚೆ ನಡೆಸಿ ಆ ಬಳಿಕ ನಿರ್ಧಾರ ಕೈಗೊಳ್ಳಲು ಸೂಚಿಸಲಾಗಿದೆ.

ಮದುವೆ ಸಮಾರಂಭಗಳ ಮೇಲೆ ನಿರ್ಬಂಧ ಯಥಾಸ್ಥಿತಿ ಮುಂದುವರಿಯಲಿದ್ದು, ಜೂನ್ 30ರವರೆಗೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5ರವರಗೆ ಕರ್ಫ್ಯೂ ಇರಲಿದೆ. ಇನ್ನು ದೇವಸ್ಥಾನಗಳ ಸಂಬಂಧಿಸಿದ ನಿಯಮಗಳನ್ನು ರಾಜ್ಯ ಸರ್ಕಾರ ಸೋಮವಾರ ಪ್ರಕಟಿಸಲಿದೆ.
ಜೂನ್ 8ರಿಂದ ಯಾವುದಕ್ಕೆ ಅವಕಾಶ:
> ಸಾರಿಗೆ ಬಸ್‍ಗಳು, ಖಾಸಗಿ ವಾಹನಗಳ ಓಡಾಟ
> ಮಾಲ್, ಹೋಟೆಲ್, ರೆಸ್ಟೋರೆಂಟ್
> ಎಲ್ಲ ಧಾರ್ಮಿಕ ಕೇಂದ್ರಗಳು
> ಆಟೋ, ಕ್ಯಾಬ್ ಆರಂಭವಾಗಲಿದೆ.

ಯಾವುದಕ್ಕೆ ನಿರ್ಬಂಧ:
> ಮೆಟ್ರೋ ಸಂಚಾರ
> ಅಡಿಟೋರಿಯಂ, ಜಿಮ್ ಕೇಂದ್ರಗಳು, ಥಿಯೇಟರ್ ಗಳು,
> ಸಾರ್ವಜನಿಕ ಈಜುಕೊಳಗಳು
> ಜೂನ್ 30ರವರೆಗೂ ಶಾಲಾ-ಕಾಲೇಜುಗಳು ಆರಂಭಿಸುವಂತಿಲ್ಲ
> ಸಿನಿಮಾ ಹಾಲ್, ಜಿಮ್ ಸೆಂಟರ್, ಸ್ವಿಮಿಂಗ್ ಪೂಲ್, ಮನರಂಜನಾ ಕೇಂದ್ರ/ಪಾರ್ಕ್, ಬಾರ್, ಸಭಾಂಗಣ ಮತ್ತು ಅತಿ ಹೆಚ್ಚು ಜನ ಸೇರುವ ಪ್ರದೇಶಗಳನ್ನು ತೆರೆಯುವಂತಿಲ್ಲ.
> ಸಾರ್ವಜನಿಕ/ರಾಜಕೀಯ/ಕ್ರೀಡೆ/ಮನರಂಜನೆ/ಶೈಕ್ಷಣಿಕ/ ಸಾಂಸ್ಕೃತಿಕ/ಧಾರ್ಮಿಕ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button