ಪ್ರಗತಿವಾಹಿನಿ ಸುದ್ದಿ, ಮಾಂಜರಿ – ಕೃಷ್ಣಾ ನದಿಗೆ ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ಏತ ನೀರಾವರಿ ಯೋಜನೆಯ ಮುಖಾಂತರ ಚಿಕ್ಕೋಡಿ ತಾಲೂಕಿನ ಹಲವಾರು ಗ್ರಾಮಗಳ ಕೆರೆ ತುಂಬುವ ಕಾರ್ಯದ ಜೊತೆಗೆ ಜಮೀನುಗಳಿಗೆ ನೀರಾವರಿ ಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಜಲ ಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಹಾಗೂ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೆತಕ ಮಹಾಂತೇಶ ಕವಟಗಿಮಠ ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ರಾಜಾರಾಮ ಮಾನೆ ಮತ್ತು ಇತರರ ರೈತರ ಜಮಿನುಗಳಿಗೆ ಮಂಜೂರಾತಿ ನೀಡಿದ ೪೩ ಲಕ್ಷ ರೂ ಅನುದಾನದ ಏತನೀರಾವರಿ ಯೋಜನೆ ಮತ್ತು ರಮೇಶ ಚೌಗಲೆ ಮತ್ತು ಇತರ ರೈತರ ಜಮಿನಿಗೆ ಮಂಜೂರಾತಿ ನೀಡಿದ ೪೪ ಲಕ್ಷ ರೂ ಅನುದಾನದ ಯೋಜನೆಯ ಕಾಮಗಾರಿಯನ್ನು ಪರಿಶಿಲಿಸಿ ಮಾತನಾಡುತ್ತಿದ್ದರು.
ಈ ವೇಳೆ ಚಿದಾನಂದ ಕೋರೆ ಸಹಖಾರಿ ಸಕ್ಕರೆ ಕಾರ್ಖಾನೆಯ ನಿರ್ದೆಶಕ ಅಜಿತರಾವ ದೇಸಾಯಿ, ಇಂಗಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಹಾಲಿ ಮತ್ತು ಮಾಜಿ ನಿರ್ದೆಶಕರು, ಗ್ರಾ.ಪಂ. ಸದಸ್ಯರು ಹಾಜರಿದ್ದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ