ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾ ಬ್ರಾಸ್ ಬ್ಯಾಂಡ್ ಮತ್ತು ಮಂಗಳವಾದ್ಯ ಕಾರ್ಮಿಕ ಕಲಾವಿದರ ಒಕ್ಕೂಟ ಕಲಾವಿದರಿಗೆ ವಿಶೇಷ ಪರಿಹಾರ ಕಲ್ಪಿಸುವಂತೆ ಗುರುವಾರ ಶಾಸಕ ಅನಿಲ್ ಬೆನಕೆ ಅವರಿಗೆ ಮನವಿ ಸಲ್ಲಿಸಿತು.
ಕೊರೋನಾ ವೈರಸ್ ನಿಂದ ದೇಶದಲ್ಲಿ ಜನಜೀವನ ದುಸ್ಥರವಾಗಿದೆ. ಅದರಲ್ಲೂ ಬ್ರಾಸ್ ಬ್ಯಾಂಡ್ ಮತ್ತು ಮಂಗಳವಾದ್ಯ ಕಾರ್ಮಿಕ ಕಲಾವಿದರು ಸೀಜನ್ ಸಂದರ್ಭದಲ್ಲಿ ಲಾಕ್ ಡೌನ್ ಆದ ಪರಿಣಾಮ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ನಮ್ಮ ಜೀವನ ನಡೆಸುವುದು ಕಷ್ಟಕರವಾಗಿದೆ. ಕೂಡಲೇ ಸರಕಾರದಿಂದ ನಮಗೆ ಸಹಾಯ ಮಾಡಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಇದಕ್ಕೆ ಸಕಾರಾತ್ಮಕವಾಗಿ ಉತ್ತರಿಸಿದ ಶಾಸಕ ಅನಿಲ್ ಬೆನಕೆ, ಕೊವೀಡ್ – 19 ಮಹಾಮಾರಿಯಿಂದ ಎಲ್ಲ ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ನಿಮ್ಮ ಸಮಸ್ಯೆಯ ಕುರಿತು ಸಿಎಂ ಯಡಿಯೂರಪ್ಪನವರ ಗಮನಕ್ಕೆ ತಂದು ಬಗೆ ಹರಿಸುವುದಾಗಿ ಭರವಸೆ ನೀಡಿದರು.
ಸುರೇಶ ಭಜಂತ್ರಿ, ಪರಶುರಾಮ ಭಜಂತ್ರಿ, ಎ.ಬಿ.ಕುಡಚಿ, ರೋಹಿತ ಸೋಲಂಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ