Kannada NewsKarnataka NewsLatest
ಕೊರೋನಾ ಟೆಸ್ಟ್ ಲ್ಯಾಬ್ ಸ್ಥಾಪನೆಯಲ್ಲಿ ಸರಕಾರ ನಿರ್ಲಕ್ಷ್ಯ – ಗಣೇಶ ಹುಕ್ಕೇರಿ ಆರೋಪ
ಸರ್ಕಾರವೇ ಕೊರೋನಾಕ್ಕೆ ಆಹ್ವಾನ ನೀಡುತ್ತಿರುವಂತಿದೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಸರಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದರೂ ಚಿಕ್ಕೋಡಿಯಲ್ಲಿ ಕೊರೋನಾ ಟೆಸ್ಟ್ ಲ್ಯಾಬ್ ಸ್ಥಾಪನೆ ಮಾಡುತ್ತಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಚಿಕ್ಕೋಡಿ -ಸದಲಗಾ ಶಾಸಕ ಗಣೇಶ ಹುಕ್ಕೇರಿ, ಇಷ್ಟೊಂದು ಗಂಭೀರ ವಿಷಯದಲ್ಲಿ ಸರಕಾರ ನಿರ್ಲಕ್ಷ್ಯ ತಾಳುತ್ತಿದೆ ಎಂದು ಕಿಡಿಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ದಿವ್ಯ ನಿರ್ಲಕ್ಷದಿಂದ ಚಿಕ್ಕೋಡಿಯಲ್ಲಿ ಸ್ಥಾಪನೆಯಾಗಬೇಕಾದ ಕೊರೋನಾ ಟೇಸ್ಟ್ ಲ್ಯಾಬ್ ವಿಳಂಬವಾಗುತ್ತಿದೆ ಎಂದರು.
ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಅವಲೋಕಿಸಿ ನಂತರ ಯಡೂರ ಗ್ರಾಮದ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರಕ್ಕೆ ಭೇಟಿ ನೀಡಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ಪಕ್ಕದ ಮಹಾರಾಷ್ಟ್ರದಲ್ಲಿ ಕೊರೋನಾ ಹಾವಳಿ ಜಾಸ್ತಿಯಾಗುತ್ತಿರುವುದರಿಂದ ಮಹಾರಾಷ್ಟ್ರದಿಂದ ಸಾಕಷ್ಟು ಜನರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ ಕೊರೋನಾ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಗೆ ಕೊರೋನಾ ಟೆಸ್ಟ್ ಲ್ಯಾಬ್ ಅತ್ಯವಶ್ಯಕವಾಗಿದೆ. ಈ ಕುರಿತಂತೆ ಸರ್ಕಾರಕ್ಕೆ ಸಾಕಷ್ಟು ಸಲ ಮನವಿಯನ್ನು ಮಾಡಿದ್ದೇನೆ. ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಕೂಡ ಪತ್ರ ಬರೆದಿದ್ದೇನೆ. ದೂರವಾಣಿಯಲ್ಲೂ ಮಾತನಾಡಿದ್ದೇನೆ. ಆದಾಗ್ಯ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ಚಿಕ್ಕೋಡಿಯಲ್ಲಿ ಕೊರೋನಾ ಟೆಸ್ಟ್ ಲ್ಯಾಬ್ ಸ್ಥಾಪಿಸುವ ಕುರಿತು ಸರ್ಕಾರ ನಿರ್ಲಕ್ಷ ಮಾಡುತ್ತಿದೆ. ಸರ್ಕಾರವೇ ಕೊರೋನಾಕ್ಕೆ ಆಹ್ವಾನ ನೀಡುತ್ತಿರುವಂತಿದೆ ಎಂದು ಗಣೇಶ ಹುಕ್ಕೇರಿ ಗಂಭೀರವಾಗಿ ಆರೋಪಿಸಿದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅನೀಲ ಪಾಟೀಲ್ ಮಾತನಾಡಿ, ಕೊರೋನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ನಿರ್ಲಕ್ಷ ಮಾಡಿದೆ. ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಈ ಭಾಗದಲ್ಲಿ ದವಸ ಧಾನ್ಯಗಳನ್ನು ವಿತರಣೆ ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ