Latest

ಇಂದು 453 ಹೊಸ ಕೊರೊನಾ ಪ್ರಕರಣ ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಇಂದು 453 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 9,150ಕ್ಕೇರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 196, ಬಳ್ಳಾರಿ 40, ಕಲಬುರಗಿ 39, ವಿಜಯಪುರ 39, ಮೈಸೂರು 18, ಗದಗ 18, ಧಾರವಾಡ 15, ಬಾಗಲಕೋಟೆ 14, ಬೀದರ್ 13, ದಾವಣಗೆರೆ 8, ಉತ್ತರ ಕನ್ನಡ 8, ಕೋಲಾರ 8, ದಕ್ಷಿಣ ಕನ್ನಡ 7, ಮಂಡ್ಯ 5, ಹಾಸನ 5, ತುಮಕೂರು 4, ಯಾದಗಿರಿ 3, ಚಿಕ್ಕಬಳ್ಳಾಪುರ 3, ಹಾವೇರಿ 3, ರಾಯಚೂರು 2, ಶಿವಮೊಗ್ಗ 2, ರಾಮನಗರ 2 ಮತ್ತು ಚಿಕ್ಕಮಗಳೂರಿನಲ್ಲಿ 1 ಪ್ರಕರಣ ಬೆಳಕಿಗೆ ಬಂದಿದೆ.

Home add -Advt

ಇಂದು ರಾಜ್ಯದಲ್ಲಿ ಐವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 225 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟು 5,618 ಗುಣಮುಖವಾಗಿದ್ದಾರೆ. 9,150 ಪ್ರಕರಣಗಳ ಪೈಕಿ 3,391 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Related Articles

Back to top button