Latest

ಕೇಬಲ್ ನೀತಿ ವಿರೋಧಿಸಿ ಪ್ರತಿಭಟನೆ: ಗುರುವಾರ ಇಡೀ ದಿನ ಕೇಬಲ್ ಟಿವಿ ಬಂದ್

    ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಗುರುವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕೇಬಲ್ ಟಿವಿ ಬಂದ್.

Related Articles

ಟ್ರಾಯ್ ಜಾರಿಗೆ ತರುತ್ತಿರುವ ಹೊಸ ಕೇಬಲ್ ನೀತಿ ವಿರೋಧಿಸಿ ರಾಜ್ಯ ಕೇಬಲ್ ಟಿವಿ ಆಪರೇಟರ್‌ ಪ್ರತಿಭಟನೆಗಿಳಿದಿದ್ದು,  ಗುರುವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ಕೇಬಲ್ ಟಿವಿ ಬಂದ್ ಮಾಡಲು ನಿರ್ಧರಿಸಿದ್ದಾರೆ. ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡುಗಳಲ್ಲಿ  ಕೇಬಲ್ ಬಂದ್ ಆಗಲಿದೆ.  ಕೇಬಲ್ ಸೆಟ್‌ಅಪ್ ಬಾಕ್ಸ್‌ ಹೊಂದಿದ ಮನೆಗಳ ಟಿವಿಯಲ್ಲಿ ಯಾವುದೇ ಚಾನೆಲ್‌ಗಳು ಬರುವುದಿಲ್ಲ. 

ಟ್ರಾಯ್‌ ಫೆಬ್ರವರಿ ಒಂದರಿಂದ ಜಾರಿಗೆ ತರಲಿರುವ ಹೊಸ ನೀತಿ ಜಾರಿಗೆ ಬಂದಲ್ಲಿ ಗ್ರಾಹಕ ತನಗೆ ಇಷ್ಟವಾದ ಚಾನೆಲ್‌ಗೆ ಮಾತ್ರವೇ ಹಣ ನೀಡಿ ನೋಡಬಹುದಾಗಿದೆ. ಇದು ಕೇಬಲ್ ಆಪರೇಟರ್‌ಗಳಿಗೆ ಆದಾಯ ಕಡಿಮೆ ಮಾಡುವ ಜೊತೆಗೆ ಶ್ರಮ ಹೆಚ್ಚಿಸುತ್ತದೆ ಎನ್ನುವುದು ಕೇಬಲ್ ಆಪರೇಟರ್ ಗಳ ವಾದ. ಜೊತೆಗೆ ಗ್ರಾಹಕರಿಗೂ ಇದು ಹೊರೆಯಾಗುತ್ತದೆ ಕೇಬಲ್ ಟಿವಿ ಆಪರೇಟರ್‌ಗಳು ಹೇಳುತ್ತಾರೆ.

ಟ್ರಾಯ್‌ ನೀತಿಗಳ ವಿರುದ್ಧ ಕೇಬಲ್ ಆಪರೇಟರ್‌ಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ ಅಲ್ಲಿಯೂ ಅವರಿಗೆ ಹಿನ್ನಡೆ ಆಗಿದೆ. ಆದರೆ ಸುಪ್ರಿಂ ತೀರ್ಪನ್ನು ಮರುಪರಿಶೀಲನೆಗೆ ಅರ್ಜಿ ಹಾಕಿ ಕಾನೂನು ಹೋರಾಟ ಮುಂದುವರೆಸಿದ್ದಾರೆ.

ಸರ್ಕಾರವು ಶೇ. 18 ತೆರಿಗೆಯನ್ನು ಕೇಬಲ್ ಉದ್ಯಮದ ಮೇಲೆ ಹೊರಿಸಿದೆ. ಕೇಬಲ ಉದ್ಯಮವನ್ನೇ ನಂಬಿಕೊಂಡಿರುವ ಹಲವು ಕುಟುಂಬಗಳು ಬೀದಿ ಪಾಲಾಗಲಿವೆ ಎಂದು ರಾಜ್ಯ ಕೇಬಲ್ ಸಂಘ ಹೇಳಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button