ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೌಢ್ಯ ಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿರುವ ಶಾಸಕ ಸತೀಶ ಜಾರಕಿಹೊಳಿ ಮತ್ತೊಂದು ಮೌಢ್ಯ ವಿರೋಧಿ ಹೆಜ್ಜೆಯನ್ನು ಹಾಕಿದ್ದಾರೆ. ತಮ್ಮ ನೂತನ ವಾಹನವನ್ನು ಸ್ಮಶಾನ ಭೂಮಿಯಿಂದ ಚಾಲನೆ ಮಾಡುವುದರ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆಯಲಿದ್ದಾರೆ.
ಈ ವಿನೂತನ ಕಾರ್ಯಕ್ರಮ ಬೆಳಗಾವಿ ಸದಾಶಿವ ನಗರದ ಬುದ್ಧ, ಬಸವ, ಅಂಬೇಡ್ಕರ ಶಾಂತಿಧಾಮ (ಸ್ಮಶಾನ)ದಲ್ಲಿ ಸೋಮವಾರ ಬೆಳ್ಳಿಗೆ ೧೧ ಗಂಟೆಗೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ನಿಜಗುಣಾನಂದ ಮಹಾಸ್ವಾಮಿಜಿಗಳು, ನಿಷ್ಕಲ ಮಂಟಪ ಬೈಲೂರು, ಜ್ಞಾನಪ್ರಕಾಶ ಸ್ವಾಮಿಜಿ ಉರಿಲಿಂಗ ಪೆದ್ದಿ, ಮಠ, ಮೈಸೂರು, ಪ್ರಸನ್ನಾನಂದ ಪುರ ಸ್ವಾಮಿಜಿಗಳು ವಾಲ್ಮೀಕಿ ಪೀಠ, ಹರಿಹರ, ಪ್ರಭುಚನ್ನಬಸವ ಮಹಾಸ್ವಾಮಿಜಿಗಳು ಮೋಟಗಿ ಮಠ, ಅಥಣಿ , ಶರಣ ಬಸವ ದೇವರು, ಚರಂತೇಶ್ವರ ಮಠ, ಬಸವ ಬೆಳವಿ ಪರಮ ಪೂಜ್ಯ ಅಮರೇಶ್ವರ ಮಹಾರಾಜರು ಸಿದ್ಧಸಂಸ್ಥಾನ ಮಠ, ಕವಲಗುಡ್ಡ-ಹಣಮಾಪುರ, ವೈದ್ಯ ಬಸವರಾಜ ಪಂಡಿತ ಗುರುಗಳು ಬಸವ ಕಲ್ಯಾಣ, ಹೆಬ್ಬಾಳ, ಮಲ್ಲಿಕಾರ್ಜುನ ಮಹಾಸ್ವಾಮಿಜಿಗಳು ಗುಬ್ಬಲಗುಡ್ಡ ಮಠ, ಘಟಪ್ರಭಾ, ಅದೃಶ್ಯಶಿವಾಚಾರ್ಯ ಸ್ವಾಮಿಜಿಗಳು ಶ್ರೀ ಶಿವಲಿಂಗೇಶ್ವರ ಮಠ, ಚಿಕ್ಕಲದಿನ್ನಿ, ಪೂಜ್ಯ ಸದ್ದಗುರು ಪ್ರಭುಲಿಂಗ ಸ್ವಾಮಿಜಿಗಳು ವಿಶ್ವಗುರು ಬಸವ ಮಂಟಪ, ಬೆಳಗಾವಿ ಹಾಗೂ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ ಮುಪ್ಪಿನ ಮಠದ ಶ್ರೀಗಳು ದಿವ್ಯಸಾನಿಧ್ಯವನ್ನು ವಹಿಸಲಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಯುಟ್ಯೂಬ್ ಚಾನಲ್ ಹಾಗೂ ಫೇಸ್‌ಬುಕ್ ಪೇಜ್‌ನಿಂದ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಗುವುದು ಎಂದು ಸಂಘಟಕರು ವಿನಂತಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ