ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಆರೋಗ್ಯ ಇಲಾಖೆ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡುವ ಮುನ್ನವೇ ಬೆಳಗಾವಿ ಜಿಲ್ಲೆಯ ಕೊರೋನಾ ಸೋಂಕಿತರ ವಿವರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದರ ಪ್ರಕಾರ ನಿನ್ನೆ ಪರೀಕ್ಷೆಗೊಳಪಟ್ಟವರ ಪೈಕಿ 92 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದು ಈವರೆಗಿನ ಎಲ್ಲ ದಾಖಲೆಗಳನ್ನು ಹೊಸಕಿ ಹಾಕಿದ್ದು, ಜಿಲ್ಲೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಪಟ್ಟಿಯಲ್ಲಿ ಸೋಂಕಿತರ ಹೆಸರು, ವಿಳಾಸ, ಸಂಪರ್ಕ ಸಂಖೆಯ ಎಲ್ಲವೂ ನಮೂದಾಗಿದ್ದು, ಎಲ್ಲ ನಿಯಮಗಳನ್ನು ಮೀರಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದೆ.
ಈ ಪಟ್ಟಿ ಪ್ರಕಾರ ರಾಯಬಾಗ 15, ಹುಕ್ಕೇರಿ 3, ಸವದತ್ತಿ 2, ರಾಮದುರ್ಗ 10, ಚಿಕ್ಕೋಡಿ 8, ಬೈಲಹೊಂಗಲ 2, ಅಥಣಿ 39 , ಬೆಳಗಾವಿ 10, ಖಾನಾಪುರ 2, ಗೋಕಾಕ 1 ಪ್ರಕರಣ ಇಂದು ದೃಢಪಟ್ಟಿದೆ.
ಆರೋಗ್ಯ ಇಲಾಖೆಯ ಹೆಲ್ತ್ ಬುಲಿಟಿನ್ ಇನ್ನು ಕೆಲವೇ ಹೊತ್ತಿನಲ್ಲಿ ಬರಲಿದ್ದು, ಅದರಲ್ಲಿ ಈ ಪಟ್ಟಿಗೆ ಅಧಿಕೃತ ಮುದ್ರೆ ಒತ್ತಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ