ಪ್ರಗತಿ ವಾಹಿನಿ ಸುದ್ದಿ, ನಂದೇಶ್ವರ – ಅಥಣಿ ತಾಲೂಕಿನ ಸತ್ತಿ ಗ್ರಾಮದ ಜನತಾ ಪ್ಲಾಟ್ ಮಹಿಳೆ ಒಬ್ಬರಲ್ಲಿ ಕೊರೋನಾ ರೋಗ ಲಕ್ಷಣ ಕಂಡು ಬಂದಿದ್ದರಿಂದ ತಪಾಸಣೆಗೆ ಒಳಪಡಿಸಿದಾಗ ಪಾಸಿಟಿವ್ ಇರುವುದು ರವಿವಾರ ಕಂಡುಬಂದಿದೆ.
ಗ್ರಾಮದಲ್ಲಿ ಮೊದಲ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿ ಜನರಲ್ಲಿ ಆತಂಕ ಮೂಡಿಸಿದೆ. ಇದರಿಂದ ಸತ್ತಿ ಗ್ರಾಮಕ್ಕೂ ಕೊರೋನಾ ಮಹಾಮಾರಿ ವಕ್ಕರಿಸಿ ದಂತಾಗಿದೆ. ಪಾಸಿಟಿವ್ ಬಂದ ಮಹಿಳೆ ಬೆಳಗಾವಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಕುಟುಂಬದ ಸದಸ್ಯರನ್ನು ಸ್ಥಳೀಯ ಗ್ರಾಮ ಪಂಚಾಯತ ಹಾಗೂ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹೋಂ ಕೋರಂಟೈನ್ ಮಾಡಿ ಮನೆಯ ಸುತ್ತಲೂ ಸೀಲ್ ಡೌನ್ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸ್ಥಳೀಯ ತಾ. ಪಂ. ಸದಸ್ಯ ಜಡೆಪ್ಪ ಕುಂಬಾರ ಮಾತನಾಡಿ ಅನಾವಶ್ಯಕವಾಗಿ ಯಾರು ಮನೆಯಿಂದ ಹೊರಗೆ ಬರಬಾರದು. ವಯೋವೃದ್ಧರ, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರದ ನಿಯಮಗಳನ್ನು ಚಾಚುತಪ್ಪದೆ ಪಾಲಿಸಬೇಕು. ಕೊರೋನಾ ರೋಗವನ್ನು ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರು ಕೈಜೋಡಿಸಬೇಕು. ರೋಗ ಬಂದ ನಂತರ ಪರದಾಡುವುದಕ್ಕಿಂತ ರೋಗ ಬರುವ ಮುಂಚೆಯೆ ಮುಂಜಾಗೃತೆ ವಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು. ಸ್ಥಳೀಯ ಗ್ರಾಮ ಪಂಚಾಯತ ಸಿಬ್ಬಂದಿ ಜನತಾ ಪ್ಲಾಟ್ ಹಾಗೂ ಪಕ್ಕದ ಬೀದಿಗಳಿಗೆ ಸ್ಯಾನಿಟೈಜರ್ ಸಿಂಪರಣೆ ಮಾಡಿದರು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಜಡೆಪ್ಪಾ ಕುಂಬಾರ, ಗ್ರಾ.ಪಂ. ಡೇಟಾ ಆಪರೇಟರ್ ವಿವೇಕ ಮಠದ, ಸ್ಥಳೀಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಮಹಾಂತೇಶ ವಾಲಿಕಾರ, ಎಂ. ವೈ. ಸಿಂಗೆ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ