ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬಸವನ ಕುಡಚಿ ಮತ್ತು ಬೆಳಗಾವಿಯ ವಡ್ಡರ ಚಾವಣಿಯ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅನೀಲ ಬೆನಕೆ ಭಾನುವಾರ ಚಾಲನೆ ನೀಡಿದರು.
ವಡ್ಡರವಾಡಿಯ ದುರ್ಗಾ ದೇವಿ ಮಂದಿರದ ಕಮಾನು ಕೆಲಸಕ್ಕೆ ಅಂದಾಜು 1.50 ಲಕ್ಷ ರೂಪಾಯಿಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.
ದುರ್ಗಾ ದೇವಿ ಮಂದಿರದ ಕಮಾನು ಕೆಲಸಕ್ಕೆ ಚಾಲನೆ ನೀಡಲಾಗಿದೆ, ಈ ಭಾಗದ ರಸ್ತೆ ಗಟಾರು ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲು ನಾವು ಸಿದ್ಧ ಹಾಗೂ ಕೋಳಗೇರಿ ಪ್ರದೇಶದಲ್ಲಿರುವ ನೀರಾಶ್ರಿತರಿಗೆ ಮನೆ ಒದಗಿಸಿ ವಿಕಾಸ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಬೆನಕೆ ಹೇಳಿದರು.
ಈ ಸಂದರ್ಭದಲ್ಲಿ ಭೀಮಾ ಈರಪ್ಪಾ ಗಾಡಿವಡ್ಡರ, ದುರ್ಗಪ್ಪಾ ಬಡಸಕರ, ಮಾರುತಿ ಬಡಸಕರ, ಭೀಮಣ್ಣಾ ಪೂಜೇರಿ, ಬಸವಣ್ಣಿ ಗಾಡಿವಡ್ಡರ, ರಾಜು ಗಾರಗೋಟಿ ಉಪಸ್ಥಿತರಿದ್ದರು.
ಬಸವನಕುಡಚಿ
ಬಸವನ ಕುಡಚಿ ಗ್ರಾಮದ ಸ್ಮಶಾನ ಭೂಮಿಯ ಅಭಿವೃದ್ಧಿ ಕೆಲಸಕ್ಕೆ ಶಾಸಕ ಅನಿಲ ಬೆನಕೆ ಶಾಸಕರ ಅನುದಾನದಲ್ಲಿ ಚಾಲನೆ ನೀಡಲಾಗಿದ್ದು 3 ಲಕ್ಷ ರೂಪಾಯಿಗಳಲ್ಲಿ ಮೊದಲ ಹಂತದ ಕಾಮಗಾರಿಯನ್ನು ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬೆನಕೆ, ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ಬಸವನ ಕುಡಚಿ ಗ್ರಾಮದ ಸ್ಮಶಾನ ಭೂಮಿಯ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಲಾಗಿದೆ. 3 ಲಕ್ಷ ರೂಪಾಯಿಗಳಲ್ಲಿ ಮೊದಲ ಹಂತದಲ್ಲಿ ಚಾಲನೆ ನೀಡಲಾಗಿದ್ದು ಬರುವ ದಿನಗಳಲ್ಲಿ ಎಲ್ಲ ಧರ್ಮಗಳ ಸ್ಮಶಾನ ಭೂಮಿಯ ಅಭಿವೃದ್ಧಿ ಕೆಲಸಕ್ಕೆ ಪೇವರ್ಸ, ಕಂಪೌಂಡ್, ಸಿ.ಸಿ.ಟಿ.ವಿ ಹಾಗೂ ಇನ್ನಿತರ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಪ್ರಮೋದ ಪಾಟೀಲ, ಸುನೀಲ ಮಾಯನ್ನಾಚೆ, ನಿಕೀಲ ಮುರ್ಕುಟೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ