ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ
ಕೆಟ್ಟ ಮಗ ಹುಟ್ಟಬಹುದು. ಆದರೆ ಕೆಟ್ಟ ತಾಯಿ ಹುಟ್ಟಲು ಸಾಧ್ಯವಿಲ್ಲ. ಇದು ನಮ್ಮ ಪರಂಪರೆ, ಸಂಸ್ಕೃತಿ ಧರ್ಮ ಆಚಾರ, ವಿಚಾರವಾಗಿದೆ ಎಂದು ಬಿಜೆಪಿ ಧುರಿಣ ಹಾಗೂ ಮಾಜಿ ಉಪಮುಖ್ಯಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಪಟ್ಟಣದ ರವದಿ ಫಾರ್ಮಹೌಸ್ ನಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರ ತಾಯಿ ಸುಮತಿ ಅವರ ಶೃದ್ದಾಂಜಲಿ ಸಭೆಯಲ್ಲಿ ಮಾತನಾಡಿದರು.
ಪ್ರಮೋದ ಮುತಾಲಿಕ ಅವರು ಕಳೆದ 42 ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವೆಕ ಸಂಘ ಸೇರಿ ವಿವಿಧ ಸಂಘಟನೆಗಳ ಮುಂಖಾತರ ದೇಶ, ಧರ್ಮ, ಸಂಘಟನೆ ಎಂದು ರಾಜ್ಯಾದ್ಯಂತ ಪ್ರವಾಸ ಕೈಗೋಳ್ಳತ್ತಾ ಮನೆ, ಮಠ, ಸಂಸಾರ ತ್ಯಾಗ ಮಾಡಿದ್ದಾರೆ. ಇದಕ್ಕೆ ತಾಯಿ, ತಂದೆ ಅವರ ಪ್ರೇರಣೆಯೇ ಸಾಕ್ಷಿಯಾಗಿದೆ ಎಂದರು.
ಕಲಬುರ್ಗಿಯ ಶ್ರೀರಾಮಸೇನಾ ರಾಜ್ಯಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮಿಜಿಯವರು ಮಾತನಾಡಿ, ಜೀಜಾ ಮಾತೆ, ಸಾವರ್ಕರ, ಭಗತ್ ಸಿಂಗ್ ಇವರುಗಳ ತಾಯಿಯನ್ನು ನಾವು ನೋಡಿಲ್ಲ, ಆದರೆ ಓರ್ವ ದೇಶ ಭಕ್ತರನ್ನು ನಾಡಿಗೆ ನೀಡಿದ ಆ ಮಹಾನ್ ತಾಯಿಯ ಸಾನಿಧ್ಯ ನಮಗೆ ದೊರಕಿದ್ದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಪ್ರಮೋದ ಇವರಿಗೆ ಸಂಘಟನೆ ಮಾಡುವಾಗ ಆದ ಕಷ್ಟಗಳು ಅಪಾರ. ಆದರೂ ಅವರು ಅದನ್ನು ಸಹಿಸಿಕೊಳ್ಳುತ್ತಾ ದೇಶ ಸೇವೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿ ಇರಿಸಿದ್ದಾರೆ. ಇಂತಹ ಹಿಂದು ಸಮಾಜ ಸೇವಕನ ಬೆಂಗಾವಲಾಗಿರೋಣ ಎಂದರು.
ರಾಣಿಬೆನ್ನೂರಿನ ಪ್ರಣವಾನಂದ ಸ್ವಾಮಿಗಳು ಮಾತನಾಡಿ, ಪ್ರಮೋದ ಅವರಿಗೆ ಆದ ಕಷ್ಟ ತೊಂದರೆ ಇನ್ನಾವ ಮುಖಂಡರಿಗೂ ಆಗಿಲ್ಲ. ಅದರು ಸಹ ಧೃತಿಗೆಡದ ಪ್ರಮೋದ ಅವರು ಹಿಂದು ಸಮಾಜ ಹಾಗೂ ದೇಶ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಇದಕ್ಕೆ ಅವರ ತಂದೆ ತಾಯಿಯ ಪ್ರೇರಣೆ ಹಾಗೂ ಆದರ್ಶವೇ ಕಾರಣವಾಗಿದೆ ಎಂದರು.
ತಾಯಿ ದಿ.ಸುಮತಿ ಹಾಗೂ ತುಮಕೂರಿನ ಸಿದ್ದಗಂಗಾ ಶ್ರೀಗಳ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಮೌನ ಆಚರಿಸಲಾಯಿತು.
ನ್ಯಾಯವಾದಿ ರಾಮಚಂದ್ರ ಜೋಶಿ ಹಾಗೂ ಭಾರತಿತಾಯಿ ಹುಕ್ಕೇರಿ ಮಾತನಾಡಿದರು.
ಪ್ರಮೋದ ಮುತಾಲಿಕ ಮಾತನಾಡಿ, ದುಖ:ದ ಸಮಯದಲ್ಲಿ ಸಾಂತ್ವನ ನೀಡಿದ ಸರ್ವರಿಗೂ ಕೃತಜ್ಙತೆ ಸಲ್ಲಿಸಿದರು.
ಶ್ರೀರಾಮ ಸೇನೆ ರಾಜ್ಯ ಮುಖಂಡರಾದ ವೀನಯ ಗೌಡ, ನಂದು ಜೈನ, ಶೀವಕುಮಾರ ರೆಡ್ಡಿ, ಮಹೇಶ ಕಟ್ಟಿಮನಿ, ಬಸವರಾಜ ಗಾಯಕವಾಡ, ರಾಧಾ ಪುರಂಧರೆ, ಬಸವರಾಜ ಸಿದ್ದಲಿಂಗನಪ್ಪನವರ, ಕರುಣಾಕರ ಪುರಾಣಿಕ, ಸಹಕಾರಿ ಧುರೀಣ ವಿಜಯ ರವದಿ, ಶಿವಪ್ರಸಾದ ಜೊಲ್ಲೆ ಗುರು ಕುಲಕರ್ಣಿ, ಕಿರಣ ಶೆಟ್ಟಿ, ಶಿವರಾಜ ಅಂಬಾರಿ, ವಿವೇಕ ಪುರಣಿಕ ಇನ್ನಿತರರು ಉಪಸ್ಥಿತರಿದ್ದರು.
ಮಂಗಳೂರಿನ ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಆಡ್ಯಾರ ಅವರು ಸ್ವಾಗತಿಸಿದರು.
ಧಾರವಾಡದ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ನಿರೂಪಿಸಿದರು. ಮುಧೋಳದ ಮಹಾಲಿಂಗಪ್ಪ ಗುಜಗಾಂವಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ