Latest

ಮಗಳ ಪ್ರಿಯಕರನನ್ನು ಇರಿದು ಕೊಂದ ತಂದೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಮಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ ಬೆನ್ನಲ್ಲೇ ಆಕೆಯ ಪ್ರಿಯಕರನ ಎದೆಗೆ 17 ಬಾರಿ ಇರಿದು ತಂದೆಯೇ ಕೊಂದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ನಡೆದಿದೆ.

ಯಗವಮದ್ದಲಖಾನೆ ಗ್ರಾಮದ ನಿವಾಸಿ ಹರೀಶ್ (25) ಕೊಲೆಯಾದ ಯುವಕ. ವೆಂಕಟೇಶ್ ಹಾಗೂ ಆತನ ಸ್ನೇಹಿತ ಗಣೇಶ್ ಕೊಲೆ ಮಾಡಿದ ಆರೋಪಿಗಳು.

ತನ್ನ ಮಗಳ ಆತ್ಮಹತ್ಯೆಗೆ ಪ್ರಿಯಕರನೇ ಕಾರಣ ಎಂದು 10 ತಿಂಗಳಿಂದ ಹೊಂಚು ಹಾಕಿದ್ದ ತಂದೆ ವೆಂಕಟೇಶ್ ತಡರಾತ್ರಿ ಯುವಕನನ್ನು ಇರಿದು ಕೊಂದಿದ್ದಾನೆ.

ಮೃತ ಹರೀಶ್ ಮತ್ತು ಕೊಲೆ ಆರೋಪಿ ವೆಂಕಟೇಶ್ ಮಗಳು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕೊನೆಗೆ ಯುವತಿಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿಕೊಡಲಾಗಿತ್ತು. ಇದಾದ 10 ತಿಂಗಳ ಹಿಂದೆ ಮನೆಯಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಳು.

ಇದರಿಂದ ತಂದೆ ವೆಂಕಟೇಶ್ ಮಗಳ ಸ್ಥಿತಿಗೆ ಹರೀಶ್ ಕಾರಣ. ಅವನನ್ನ ಪ್ರೀತಿ ಮಾಡಿದ್ದರಿಂದಲೇ ತನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು ಎಂದು ಕೋಪಗೊಂಡಿದ್ದ. ತಡರಾತ್ರಿ ಬೈಕಿನಲ್ಲಿ ತೆರಳುತ್ತಿದ್ದ ಹರೀಶ್‍ನನ್ನ ಹಿಂಬಾಲಿಸಿದ್ದ ವೆಂಕಟೇಶ್ ಬಳಿಕ ಆತನನ್ನು ಹಿಡಿದು ಚಾಕುವಿನಿಂದ 17 ಬಾರಿ ಇರಿದು ಕೊಲೆ ಮಾಡಿದ್ದಾನೆ.

ಆರೋಪಿಗಳಾದ ವೆಂಕಟೇಶ್ ಹಾಗೂ ಆತನ ಸ್ನೇಹಿತ ಗಣೇಶ್‍ನನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button