ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 606ಕ್ಕೇರಿಕೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದಿನದಿಂದ ದಿನಕ್ಕೆ ಕಬಂದ ಬಾಹು ಚಾಚುತ್ತಿರುವ ಮಾರಣಾಂತಿಕ ಕೊರೊನಾ ವೈರಸ್ 196 ದೇಶಗಳಿಗೆ ವ್ಯಾಪಿಸಿದ್ದು, ಸೋಂಕಿತರ ಸಂಖ್ಯೆ 4.69 ಲಕ್ಷಕ್ಕೇರಿದೆ.

ಭಾರತದಲ್ಲಿ ಕೊರೊನಾ ಸೋಂಕಿಗೆ 11 ಜನರು ಬಲಿಯಾಗಿದ್ದಾರೆ. ವಿಶ್ವಾದ್ಯಂತ 21,185 ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದ್ದು, ಬುಧವಾರ ಒಂದೇ ದಿನ 683 ಮಂದಿ ಬಲಿಯಾಗಿದ್ದಾರೆ. ಇಟಲಿಯಲ್ಲಿ ಇಲ್ಲಿವರೆಗೆ 7,503 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.

Home add -Advt

ಇನ್ನು ಸ್ಪೇನ್ ನಲ್ಲಿ ಒಂದೇ ದಿನ 656 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಫ್ರಾನ್ಸ್ ನಲ್ಲಿ 231 ಜನರು ಹಾಗೂ ಅಮೆರಿಕದಲ್ಲಿ 155 ಮಂದಿ ಕೊರೊನಾ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.

ಭಾರತದಲ್ಲಿ ಲಾಕ್‍ಡೌನ್ ಮೊದಲ ದಿನವೇ 70 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 606ಕ್ಕೆ ಏರಿಕೆಯಾಗಿದೆ.

Related Articles

Back to top button