ಪ್ರಗತಿವಾಹಿನಿ ಸುದ್ದಿ, ಮೂಡಲಗಿ
ಸ್ಥಳಿಯ ಪ್ರತಿಷ್ಠಿತ ಶ್ರೀ ಬಸವೇಶ್ವರ ಅರ್ಬನ್ ಕೊ-ಆಪ್ ಕ್ರೇಡಿಟ್ ಸೊಸೈಟಿಯ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ಢವಳೇಶ್ವರ ಗುಂಪಿನ ೧೨ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಸಾಮಾನ್ಯ ವರ್ಗದಿಂದ-ಗೀರಿಶ ಸುಭಾಸ ಢವಳೇಶ್ವರ(೧೭೭೯), ಮಲ್ಲಿಕಾರ್ಜುನ ಭೀಮಪ್ಪ ಢವಳೇಶ್ವರ(೧೮೫೪), ಬಸಪ್ಪ ಮಲ್ಲಪ್ಪ ತೇಲಿ(೧೬೭೫), ಚನ್ನಬಸು ಭೀಮಪ್ಪ ಬಡ್ಡಿ(೧೬೪೩), ರವೀಂದ್ರ ಈರಪ್ಪ ಭಾಗೋಜಿ(೧೬೪೮), ಶ್ರೀಶೈಲ ಯಲ್ಲಪ್ಪ ಮದಗನ್ನವರ(೧೬೪೦), ಶ್ರೀಕಾಂತ ಶಿವಯ್ಯ ಹಿರೇಮಠ(೧೬೭೮), ಹಿಂದುಳಿದ ವರ್ಗ ಅ ದಿಂದ-ದೇವಪ್ಪ ಫಕೀರಪ್ಪ ಕೌಜಲಗಿ(೧೭೩೪), ಕುಸುಮಾ ಆನಂದ ತೇಲಿ(೧೬೭೬), ಮಹಿಳಾ ವರ್ಗದಿಂದ- ಸುಮಿತ್ರಾ ಪ್ರಕಾಶ ಶೇಡಬಾಳ(೧೭೭೬), ಮಹಾದೇವಿ ಶಂಕ್ರಯ್ಯ ಹಿರೇಮಠ(೧೮೭೫), ಪರಿಶಿಷ್ಟ ಜಾತಿಯಿಂದ- ಲಕ್ಷ್ಮಣ ಬಸವಂತ ಕೆಳಗಡೆ(೧೩೦೯) ಗೆಲುವು ಸಾಧಿಸಿದ್ದಾರೆ.
೧೯೯೫ರಲ್ಲಿ ಸ್ಥಾಪನೆಯಾದ ಈ ಸೊಸಾಯಿಟಿಯ ೨೪ ವರ್ಷಗಳ ಅವಧಿಯಲ್ಲಿ ೫ ಸಾರಿಯ ಆಡಳಿತ ಮಂಡಳಿಗೆ ಚುನಾವಣೆ ನಡೆಯದೆ ಅವಿರೊಧ ಆಯ್ಕೆ ನಡೆದಿತ್ತು. ಆದರೆ ಈ ಸಾರಿ ಆಡಳಿತ ಮಂಡಳಿಯ ಆಂತರಿಕ ಕಲಹದಿಂದ ಚುನಾವಣೆ ನಡೆಯುತ್ತಿರುವುದು ಕುತುಹಲ ಮೂಡಿಸಿತ್ತು., ಸೊಸಾಯಿಟಿ ಸಂಸ್ಥಾಪಕ ಅಧ್ಯಕ್ಷ ಬಸಪ್ರಬು ನಿಡಗುಂದಿ ಗುಂಪಿಗೆ ಚುನಾವಣೆಯಲ್ಲಿ ಬಹಳ ಅಂತರಿಂದ ಸೋಲುಂಟಾಯಿತು.
ಸೊಸಾಯಿಟಿಯ ಒಟ್ಟು ೮೨೨೨ ಸದಸ್ಯರಲ್ಲಿ ಚುನಾವಣಾ ಪೂರ್ವದಲ್ಲಿ ಸೊಸಾಯಿಟಿ ವಾರ್ಷಿಕ ಸಭೆ, ಕಟ್ಟಭಾಕಿ ಸಾಲಗಾರರು, ಉಳಿತಾಯ ಖಾತೆ ಹಣಕಾಸಿನ ವ್ಯವಹಾರ ನಡೆಸಿರುವುದಿಲ್ಲ ಎಂದು ೭೬೨೬ ಸದಸ್ಯರು ಮತದಾನಕ್ಕೆ ಅರ್ಹರಲ್ಲ ಎಂದು, ಕೇವಲ ೫೯೬ ಸದಸ್ಯರು ಮತದಾನ ಹಕ್ಕನ್ನು ಪಡೆದಿದ್ದಾರೆ ಎಂದು ಮತದಾರರ ಯಾದಿಯನ್ನು ಬಿಡುಗಡೆಗೊಳಿಸಲಾಗಿತ್ತು. ನಿಡಗುಂದಿ ಗುಂಪು ಎಲ್ಲರಿಗೂ ಮತದಾನ ಹಕ್ಕನ್ನು ನೀಡಬೇಕೆಂದು ಚುನಾವಣಾ ಅಧಿಕಾರಿಗಳನ್ನು ಪ್ರಶ್ನಿಸಿದ್ದರಿಂದ ೭೨೩೬ ಸದಸ್ಯರಿಗೆ ಮತದಾನದ ಅವಕಾಶವನ್ನು ಕಲ್ಪಿಸಲ್ಲಾಗಿತ್ತು. ನಿಡಗುಂದಿ ಗುಂಪು ಚುನಾವಣಾ ಪ್ರಾಧಿಕಾರದಿಂದ ಜಯಗಳಿಸಿದರೂ ಚುನಾವಣೆಯಲ್ಲಿ ಮತ ಪಡೆಯುವಲ್ಲಿ ವಿಫಲವಾಯಿತು.
ಭಾರಿ ಅಂತರದಿಂದ ಗೆಲುವು ಸಾಧಿಸಿದ ಢವಳೇಶ್ವರ ಗುಂಪಿನ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಸೋಮವಾರ ರಾತ್ರಿ ಫಲಿತಾಂಶ ತಿಳಿಯುತ್ತಿದಂತೆ ಪಟಾಕಿ ಸಿಡಿಸಿ ಸೊಸಾಯಿಟಿಯಿಂದ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಉಪಸ್ಥಿತಿಯಲ್ಲಿ ಮೆರವಣಿಗೆ ಮೂಲಕ ಇಲ್ಲಿಯ ಆರಾಧ್ಯ ಧೈವ ಶಿವಬೋಧರಂಗ ಮಠಕ್ಕೆ ತೆರಳಿ ದರ್ಶನ ಪಡೆದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ