Kannada NewsKarnataka News

ಬಳ್ಳಾರಿ ನಾಲಾದಲ್ಲಿ ಕಾಲು ಜಾರಿ ಬಿದ್ದ ಯುವಕನ ಶವ ಪತ್ತೆ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಕಾಲು ಜಾರಿ ಬಳ್ಳಾರಿ ನಾಲಾದಲ್ಲಿ ಶನಿವಾರ ಸಂಜೆ ಕೊಚ್ಚಿ ಹೋದ ಯುವಕನ ಶವ ಭಾನುವಾರದಂದು ಸಂಜೆ ಪತ್ತೆಯಾಗಿದೆ.
ತಾಲೂಕಿನ ಡುಮ್ಮ ಉರುಬಿನಟ್ಟಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಜಲಾವೃತಗೊಂಡ ಗದ್ದೆಯಲ್ಲಿ ಮುಳುಗಡೆಯಾದ ಪಂಪ್ ಸೆಟ್ ನೋಡಲು ಹೋಗಿದ್ದ ನಾಗರಾಜ್ ಹುಬ್ಬಳ್ಳಿ (೧೮) ಎಂಬ ಯುವಕ ಕಾಲು ಜಾರಿ ಬಳ್ಳಾರಿ ನಾಲಾದಲ್ಲಿ ಕೊಚ್ಚಿ ಹೋಗಿದ್ದನು.
ವಿಷಯ ತಿಳಿದ ಬಳಿಕ ಎಸ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ಮೀನುಗಾರರ ಸಹಾಯದಿಂದ ಎರಡು ದಿನಗಳ ಕಾಲ ಶವ ಶೋಧ ಕಾರ್ಯಾಚರಣೆ ತೊಡಗಿದ್ದರು. ಇಂದು ಸಂಜೆ ಶವ ಪತ್ತೆಯಾಗಿದ್ದು, ಅಂಕಲಗಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

Home add -Advt

Related Articles

Back to top button