GIT add 2024-1
Laxmi Tai add
Beereshwara 33

ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ

ಚಿಕ್ಕೋಡಿಯ ಕೆ ಎಲ್ ಇ ಇಂಜಿನೀಯರಿಂಗ್ ಕಾಲೇಜಿನ ಮೆಕ್ಯಾನೀಕಲ್ ವಿಭಾಗದಲ್ಲಿ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ  – ಚಿಕ್ಕೋಡಿಯ ಕೆ ಎಲ್ ಇ ಇಂಜಿನೀಯರಿಂಗ ಕಾಲೇಜಿನ ಮೆಕ್ಯಾನೀಕಲ್ ವಿಭಾಗದಲ್ಲಿ ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯ ನಿಮಿತ್ತ ಒಂದು ದಿನದ ವೆಬಿನಾರ್ ಫ್ಯೂಚರ್ ಪ್ರಾಸ್ಪೆಕ್ಟ್ ಆಫ್ ಗ್ರೀನ್ ಫ್ಯೂಯಲ್ ಹಮ್ಮಿಕೊಳ್ಳಲಾಯಿತು.

ಜೊತೆಗೆ ಕಾಲೇಜಿನ ಆವರಣದಲ್ಲಿ ಹೊಂಗೆ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿದ್ದ  ಡಾ. ವೆಂಕಟೆಶ್ ಲಮಾಣಿ, ಪ್ರಾಧ್ಯಾಪಕರು, ಬಿ. ಎಮ್. ಎಸ್. ಕಾಲೇಜು, ಬೆಂಗಳೂರು ಮಾತನಾಡಿ- ಇಂದು ವಾಹನಗಳು ಉಗುಳುವ ಇಂಗಾಲದ ಡೈ ಆಕ್ಸಾಯಡ್ ಹಾಗೂ ಇನ್ನಿತರ ಅಪಾಯಕಾರಿ ಅನಿಲಗಳಿಂದ ವಾತಾವರಣವು ಪ್ರದುಶೀತಗೊಂಡಿದೆ. ಇದರಿಂದ ಮುಕ್ತಗೊಳಿಸಬೇಕಾದರೆ ಜೈವಿಕ ಇಂಧನ ಬಳಕೆಯಿಂದ ಮಾತ್ರ ಸಾಧ್ಯ ಎಂದರು.

Emergency Service

ಜೈವಿಕ ಇಂಧನವು ಭವಿಷ್ಯತ್ತಿನ ಇಂಧನವಾಗಿದೆ. ವರ್ಷದಿಂದ ವರ್ಷಕ್ಕೆ ಡಿಸೇಲ್ ಬೇಡಿಕೆ ಹೆಚ್ಚುತ್ತಿದ್ದು, ಅದರ ಬದಲಿಯಾಗಿ ಜೈವಿಕ ಇಂಧನಕ್ಕೆ ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಂಡಿದ್ದು ಡಿಸೇಲ್ ಇಂಜಿನ್ ನಲ್ಲಿ ಡಿಸೇಲ್ ಬದಲಿಯಾಗಿ ೪೦ ಪ್ರತಿಶತ ಜೈವಿಕ ಇಂಧನ ಹಾಗೂ ೬೦ ಪ್ರತಿಶತ ಪೆಟ್ರೋಡಿಸೇಲ್‌ಗಳ ಮೀಶ್ರಣ ಬಳಸಲೂ ಸೂಚಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ-
ಜೈವಿಕ ಇಂಧನ ಬಳಕೆ ಪರಿಸರ ಮಾಲಿನ್ಯವನ್ನು ಕಡಿಮೆಗೊಳಿಸುತ್ತದೆ. ನಮ್ಮ ಭಾಗದಲ್ಲಿ ಒಣ ಪ್ರದೇಶ ಹೆಚ್ಚಾಗಿದ್ದು, ಇಲ್ಲಿ ಕಡಿಮೆ ನೀರಿನಲ್ಲಿ ಬೆಳೆಯಲ್ಪಡುವ ಹೊಂಗೆ, ಬೇವು ಗಿಡಗಳನ್ನು ಬೆಳೆಸಿ ಅವುಗಳ ಬೀಜಗಳಿಂದ ಜೈವಿಕ ಇಂಧನ ತಯಾರಿಸಬಹುದಾಗಿದೆ ಎಂದರು.

ನೈಸರ್ಗಿಕ ಸಂಪನ್ಮೂಲಗಳನ್ನು ಚತುರತೆಯಿಂದ ಬಳಸಿ ಮುಂದಿನ ಪಿಳಿಗೆಗೆ ಮಾಲಿನ್ಯರಹಿತ ಪರಿಸವವನ್ನು ನೀಡಿ. ನಮ್ಮ ದೇಶದ ಆರ್ಥಿಕತೆ ಸದೃಡಗೊಳ್ಳಬೇಕಾದರೆ ರೈತರ ಬಲವನ್ನು ಹೆಚ್ಚಿಸಬೇಕು. ಭವಿಷ್ಯದಲ್ಲಿ ಕೃಷಿಗೆ ಪ್ರಾಮುಖ್ಯತೆ ಬರಲಿದ್ದು, ವಿದ್ಯಾರ್ಥಿಗಳು ರೈತರಿಗೆ ಉಪಯುಕ್ತಕಾರಿ ಪ್ರಾಜೆಕ್ಟಗಳನ್ನು ಹಮ್ಮಿಕೊಂಡು ಹೊಸ-ಹೊಸ ತಂತ್ರಜ್ಞಾನಗಳನ್ನು ಸೃಷ್ಟಿಸಲೂ ಕರೆ ನೀಡಿದರು.
ಮೆಕ್ಯಾನೀಕಲ್ ವಿಭಾಗ ಮುಖ್ಯಸ್ಥರಾದ ಪ್ರೊ. ವೀರಭದ್ರ ಬೂದ್ಯಾಳ ಸ್ವಾಗತಿಸಿದರು.
ಸಂಯೋಜಕರಾದ ಪ್ರೊ. ಗಜಾನನ ದೆಸ್ತೋಟ ನಿರೂಪಿಸಿದರು.
ಕು. ರಾಹುಲ ಜಾಧವ, ಕು. ಪ್ರವೀಣ ಕೂಟ ತಾಂತ್ರೀಕ ಸಹಕಾರ ನೀಡಿದರು.

Bottom Add3
Bottom Ad 2