Kannada NewsKarnataka NewsLatest

ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿ ಗೋಗಟೆ ವಿದ್ಯಾರ್ಥಿನಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿ  ಪೂರ್ವಾ ಮುತಗೇಕರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೬೨೫ ಕ್ಕೆ ೬೧೩ ಅಂಕಗಳಿಸಿ ಶೇ.೯೮.೦೮% ಮಾಡಿ ಬೆಳಗಾವಿ ನಗರಕ್ಕೆ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ಈ ಸಾಧನೆಗಾಗಿ ಶಿಕ್ಷಣ ಇಲಾಖೆಯ ವತಿಯಿಂದ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ  ವಾಯ್.ಜೆ.ಬಜಂತ್ರಿ ಶಾಲೆಗೆ ಆಗಮಿಸಿ ಫಲಪುಷ್ಪ ಹಾಗೂ ಶಾಲು ಹೊದಿಸಿ ಹಾಗೂ ಸಿಹಿ ಹಂಚಿ ಪೂರ್ವಾ ಮುತಗೇಕರ ಇವಳನ್ನು ಸನ್ಮಾನಿಸಿದರು.

ಪೂರ್ವಾ ಮುತಗೇಕರ ಇವಳು ಕನ್ನಡದಲ್ಲಿ ೧೨೫, ಗಣಿತದಲ್ಲಿ ೧೦೦, ಹಿಂದಿಯಲ್ಲಿ ೧೦೦, ಸಮಾಜ ವಿಜ್ಞಾನದಲ್ಲಿ ೧೦೦, ವಿಜ್ಞಾನದಲ್ಲಿ ೯೬ ಹಾಗೂ ಇಂಗ್ಲೀಷನಲ್ಲಿ ೯೨ ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾಳೆ.

ಕನ್ನಡ ಮಾಧ್ಯಮದಲ್ಲಿ ಕಲಿತು ಮಾರಾಠಿ ಮಾತೃ ಭಾಷೆ ಇದ್ದರೂ ಕೂಡಾ ಇಷ್ಟೊಂದು ಸಾಧನೆ ಮಾಡಿದ್ದರಿಂದ ವಿದ್ಯಾರ್ಥಿನಿಯನ್ನು ವಾಯ್.ಜೆ.ಬಜಂತ್ರಿ ಶ್ಲಾಘಿಸಿದರು. ಅತೀ ಹೆಚ್ಚು ಮಕ್ಕಳು ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ ಇದೇ ರೀತಿ ಹೆಚ್ಚು ಸಾಧನೆ ಮಾಡಿ ಕರ್ನಾಟಕದಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ಮಿಂಚಬೇಕು ಎಂದು  ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಡಾ.ರಾಜಶೇಖರ ಚಳಗೇರಿ, ಮುಖ್ಯೋಪಾಧ್ಯಾಯರಾದ ಎಮ್.ಕೆ.ಮಾದಾರ ಹಾಗೂ ಬಿ.ಸಿ.ಸವಣೂರ, ನಗರ ವಲಯದ ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿಗಳಾದ ಪರವೀನ ನದಾಫ, ಸಿ.ಆರ್.ಪಿ. ಸಂಜಯ ಪಾಟೀಲ, ಎಚ್.ಎ.ಮುಲ್ಲಾ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button