Latest

ಮ್ಯಾಟ್ರಿಮೋನಿ ಮೂಲಕ ವಂಚನೆ; ಮಹಿಳೆ ಬಂಧನ

ಪ್ರಗತಿವಾಹಿನಿ ಸುದ್ದಿ; ಹಾಸನ: ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡಿಕೊಂಡ ಮಹಿಳೆಯೊಬ್ಬಳು ಬರೋಬ್ಬರಿ 6 ಲಕ್ಷ ವಂಚಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಲಕ್ಷ್ಮಿ (32) ಮತ್ತು ಆಕೆಗೆ ಸಹಾಯ ಮಾಡಿದ್ದ ಶಿವಣ್ಣ ಬಂಧಿತ ಆರೋಪಿಗಳು. ಆರೋಪಿ ಲಕ್ಷ್ಮಿ ಚಿಕ್ಕಬಳ್ಳಾಪುರ ಮೂಲದವಳಾಗಿದ್ದು, ಶಿವಣ್ಣ ಕೋಲಾರ ಮೂಲದವನು ಎಂದು ತಿಳಿದುಬಂದಿದೆ. ಹಾಸನದ 40 ವರ್ಷದ ಅವಿವಾಹಿತ ಪರಮೇಶ್ ದೂರಿನ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Home add -Advt

ಪರಮೇಶ್ ಎಂಬಾತನ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿ ಲಕ್ಷ್ಮಿ ಮ್ಯಾಟ್ರಿಮೋನಿ ಮೂಲಕ ಪರಮೇಶ್‍ನನ್ನು ಪರಿಚಯ ಮಾಡಿಕೊಂಡಿದ್ದಳು. ನಾನು ಅನಾಥೆ, ಚಿಕ್ಕಮ್ಮನ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ನಾನು ಐಟಿಯಲ್ಲಿ ಉದ್ಯೋಗಿ ಎಂದು ಪರಿಚಯ ಮಾಡಿಕೊಂಡಿದ್ದಳು.

ಇದೇ ಪರಿಚಯದಿಂದ ಡಿಸೆಂಬರ್ 2019 ರಿಂದ 2020ರ ತನಕ ಸುಮಾರು ಆರು ಲಕ್ಷ ರೂಪಾಯಿಯನ್ನು ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದಳು. ಹಣ ಬಂದ ಮೇಲೆ ನನಗೆ ಕಾಲ್ ಮಾಡಿದರೆ ಅತ್ಯಾಚಾರ ಕೇಸ್ ಹಾಕುತ್ತೇನೆ ಎಂದು ಲಕ್ಷ್ಮಿ ಬೆದರಿಕೆ ಹಾಕಿದ್ದಳು. ವಂಚನೆಗೊಳಗಾಗಿದ್ದು ಗೊತ್ತಾಗುತ್ತಿದ್ದಂತೆಯೇ ಪರಮೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದೀಗ ವಂಚನೆಯೆಸಗಿದ್ದ ಮಹಿಳೆ ಲಕ್ಷ್ಮಿ ಹಾಗೂ ಆಕೆಗೆ ಸಹಾಯ ಮಾಡಿದ್ದ ವ್ಯಕ್ತಿ ಶಿವ ಎಂಬಾತನನ್ನು ಬಂಧಿಸಿರುವ ಹಾಸನ ಪೊಲೀಸರು ವಿಚಾರಣೆ ನದೆಸಿದ್ದಾರೆ.

Related Articles

Back to top button