ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಲೋಕಸಭೆ ಚುನಾವಣೆ ಹತ್ತಿರ ಬಂದಿರುವುದರಿಂದ ಕೇಂದ್ರದ ಎನ್ ಡಿಎ ಸರಕಾರ ಶುಕ್ರವಾರ ಜನಪ್ರಿಯ ಬಜೆಟ್ ಮಂಡಿಸಲಿದೆ ಎನ್ನುವ ಭಾವನೆ ಜನರಲ್ಲಿದ್ದು, ಭಾರೀ ಕೊಡುಗೆಗಳು ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಚುನಾವಣೆಗೆ ಕೆಲವೇ ತಿಂಗಳಿರುವುದರಿಂದ ಮತದಾರರ ಓಲೈಕೆಗೆ ಬಿಜೆಪಿಗೆ ಉತ್ತಮ ಅವಕಾಶ ಸಿಕ್ಕಿದೆ ಎಂದು ಬಿಂಬಿಸಲಾಗುತ್ತಿದೆಯಾದರೂ ಕಳೆದ ನಾಲ್ಕೂವರೆ ವರ್ಷದಲ್ಲಿ ನರೇಂದ್ರ ಮೋದಿ ಸರಕಾರ ಓಟ್ ಬ್ಯಾಂಕ್ ಗಾಗಿ ಯಾವುದೇ ಅನುತ್ಪಾದಕ ಯೋಜನೆಗಳನ್ನು ಜಾರಿಗೊಳಿಸಿಲ್ಲದಿರುವುದರಿಂದ ಈಗಲೂ ಅಂತಹ ನಿರೀಕ್ಷೆ ಕಷ್ಟ.
ಆದರೆ ಪಂಚ ರಾಜ್ಯ ಚುನಾವಣೆ ಫಲಿತಾಂಶ ಮತ್ತು ಇತ್ತೀಚಿನ ಚುನಾವಣೆ ಸಮೀಕ್ಷೆಗಳು ಬಿಜೆಪಿಗೆ ಶಾಕ್ ನೀಡಿವೆ. ಚುನಾವಣೆ ಹೊಸ್ತಿಲಲ್ಲಿ ಹೆಚ್ಚುತ್ತಿರುವ ವಿಪಕ್ಷಗಳ ಬಲ ನಿಯಂತ್ರಿಸುವ ಅನಿವಾರ್ಯತೆಯೂ ಇದೆ. ರೈತರು, ತೆರಿಗೆದಾರರು ಮತ್ತು ಗ್ರಾಮೀಣ ಜನರಿಗಾಗಿ ಈ ಬಜೆಟ್ ನಲ್ಲಿ ಹೆಚ್ಚಿನ ಕೊಡುಗೆಗಳನ್ನು ನೀಡುವ ನಿರೀಕ್ಷೆ ಇದೆ.
ಹಣಕಾಸು ಸಚಿವ ಅರುಣ ಜೈಟ್ಲೆ ಅನಾರೋಗ್ಯದಲ್ಲಿರುವುದರಿಂದ ರೈಲ್ವೆ ಸಚಿವ ಹಾಗೂ ಪ್ರಭಾರ ಹಣಕಾಸು ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕೇಂದ್ರದ ಬಜೆಟ್ ಮಂಡಿಸಲಿದ್ದಾರೆ.
ಬೆಳಗಾವಿ-ಧಾರವಾಡ ನೇರ ರೈಲ್ವೆ, ರಿಂಗ್ ರಸ್ತೆಗೆ ಅನುದಾನ ಸೇರಿದಂತೆ ಬೆಳಗಾವಿಗೆ ಈ ಬಜೆಟ್ ನಲ್ಲಿ ಹಲವು ನಿರೀಕ್ಷೆಗಳಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ