ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ – ಪಟ್ಟಣದ ಗಣ್ಯ ನಾಗರಿಕರೂ, ಹಿರಿಯ ವೈದ್ಯರೂ ಆಗಿದ್ದ ಡಾ. ಗಂಗಾಧರ ಕಾಲಕುಂದ್ರಿ(85) ಅವರು ಶನಿವಾರ ರಾತ್ರಿ ಕೊಲ್ಹಾಪುರದ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಸಾವಿಗೀಡಾದರು.
ಅವರಿಗೆ ಪತ್ನಿ, ಮೂವರು ಪುತ್ರಿಯರು, ಓರ್ವ ದತ್ತುಪುತ್ರ ಇದ್ದಾರೆ.
ಬಡವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವಲ್ಲಿ ಹೆಸರುವಾಸಿಯಾಗಿದ್ದ ಅವರು ತಮ್ಮ ಸರಳ ನಡೆನುಡಿಯಿಂದ ಜನಪ್ರಿಯವಾಗಿದ್ದರು. ಮನೆ ಮನೆಗೆ ಹೋಗಿ ರೋಗಿಗಳ ಸೇವೆ ಮಾಡುವಲ್ಲಿ ಅವರು ಪ್ರಸಿದ್ಧರಾಗಿದ್ದರು.
ಕಳೆದ ಆ.18ರಂದು ಅವರ ಕಿರಿಯ ಸಹೋದರ ಡಾ.ಯಶವಂತ ಕಾಲಕುಂದ್ರಿ ಅವರೂ ಕೂಡ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ.
ಮೂಲತಃ ಕಾಲಕುಂದ್ರಿ ಮನೆತನವು ವೈದ್ಯರ ಮನೆತನವೆಂದೇ ಪ್ರಸಿದ್ಧಿಯಾಗಿದೆ. ಇವರ ತಂದೆ ಶ್ರೀಪಾದ ಕಾಲಕುಂದ್ರಿಯವರು ಡಾಕ್ಟರರಾಗಿದ್ದರು. ಡಾ. ಗಂಗಾಧರ ಅವರ ನಾಲ್ವರೂ ಸೋದರರು ಕೂಡ ಡಾಕ್ಟರರಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ