Latest

ನಾಟಿ ವೈದ್ಯ ಹುಲಿಮನೆ ಸತ್ಯನಾರಾಯಣ ಹೆಗಡೆ ನಿಧನ

ಪ್ರಗತಿವಾಹಿನಿ ಸುದ್ದಿ, ಶಿರಸಿ: ಪಾರ್ಶ್ವವಾಯು ಸೇರಿದಂತೆ‌ ಅನೇಕ ಖಾಯಿಲೆಗಳಿಗೆ ಪರಿಣಾಮಕಾರಿ ಔಷಧ‌  ನೀಡುತ್ತಿದ್ದ ತಾಲೂಕಿನ ಯಡಹಳ್ಳಿಯ ಹುಲಿಮನೆ ಸತ್ಯನಾರಾಯಣ ಹೆಗಡೆ (೭೬) ನಿಧನರಾದರು.
ಅನೇಕ‌ ದಶಕಗಳಿಂದ ರಾಜ್ಯ, ಹೊರ ರಾಜ್ಯದಿಂದಲೂ ಆಗಮಿಸುತ್ತಿದ್ದ ಜನರ ರೋಗಕ್ಕೆ ಚಿಕಿತ್ಸೆ ನೀಡಿ ಗುಣಮುಖಗೊಳಿಸುತ್ತಿದ್ದ ಅವರು,  ನರಶೂಲೆ‌, ಕಸ ಸೇರಿದಂತೆ‌ ಇತರ ರೋಗಗಳಿಗೂ ಔಷಧ‌ ನೀಡುತ್ತಿದ್ದರು. ಹುಲಿಮನೆ ಸತ್ಯಣ್ಣ‌ ಎಂದೇ ಪರಿಚಿತರಾಗಿದ್ದರು.
ಪತ್ನಿ,  ಮೂವರು ಪುತ್ರರು, ಪುತ್ರಿ ಸಹಿತ ಅಪಾರ ಬಂಧು ಬಳಗ ಅಗಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button