Kannada NewsLatest

ಯಲ್ಲಮ್ಮನ ದರ್ಶನ ಪಡೆದು ಅಧಿವೇಶನಕ್ಕೆ ತೆರಳಿದ ಉಪಸಭಾಪತಿ ಮಾಮನಿ

 ಉಗರಗೋಳ(ತಾ. ಸವದತ್ತಿ) – ಬೆಂಗಳೂರಿನಲ್ಲಿ ಸೋಮವಾರ ಪ್ರಾರಂಭಗೊಳ್ಳುವ ಅಧಿವೇಶನದಲ್ಲಿ ಪ್ರಥಮ ಬಾರಿಗೆ ಉಪಸಭಾಪತಿ ಸ್ಥಾನವನ್ನು ಅಲಂಕರಿಸುವ ಮುನ್ನಾ ದಿನ ರವಿವಾರ  ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದ ವಿಧಾನಸಭೆ ಉಪಸಭಾಪತಿ, ಶಾಸಕ ಆನಂದ ಮಾಮನಿ ಅವರನ್ನು ದೇವಸ್ಥಾನ ವತಿಯಿಂದ ರವಿ ಕೊಟಾರಗಸ್ತಿ ಹಾಗೂ ದೇವಸ್ಥಾನ ಸಿಬ್ಬಂದಿ ಶಾಲೂಹೊದಿಸಿ ಸತ್ಕರಿಸಿದರು.
ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ್ರ ಮಾಳಗಿ, ಆರ್ ಎಚ್ ಸವದತ್ತಿ, ಅಲ್ಲಮಪ್ರಭು ಪ್ರಭುನವರ, ಪ್ರಕಾಶ ಪ್ರಭುನವರ, ಪಂಡಿತ ಯಡೂರಯ್ಯ, ಏಕನಗೌಡ ಮುದ್ದನಗೌಡ್ರ, ಪರಸನಗೌಡ ಕಾಳಿಂಗೌಡ್ರ, ಮಂಜನಗೌಡ ಸಂಧಿಮನಿ ಹಾಗೂ ದೇವಸ್ಥಾನ ಅರ್ಚಕರು, ದೇವಸ್ಥಾನ ಸಿಬ್ಬಂದಿ ಇದ್ದರು.

ಸತ್ಕಾರ

ದಸರಾ ಹಬ್ಬದ ಪ್ರಯುಕ್ತ ಪ್ರಸಾರಗೊಳ್ಳಲಿರುವ ನವಶಕ್ತಿ ದರ್ಶನ, ಚಿತ್ರೀಕರಣಕ್ಕೆ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಬೆಂಗಳೂರಿನ ಶ್ರಿಸಾಯಿ ನಿರ್ಮಲಾ ಪ್ರೋಡಕ್ಷನ್ ನ ನಿರ್ದೆಶಕಿ ನಿರ್ಮಲಾ ಚನ್ನಪ್ಪ ಹಾಗೂ ನಿರ್ಮಾಪಕ ಸರ್ದಾರ್‌ಸತ್ಯ ದಂಪತಿಯನ್ನು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ ಶಾಲು ಹೊದಿಸಿ ಸತ್ಕರಿಸಿದರು.
ಪ್ರತಿಯೊಬ್ಬರು ದೇವರಲ್ಲಿ ಭಕ್ತಿ ಭಾವ ಹೊಂದಿರಬೇಕು ಹಾಗೂ ಭಕ್ತ ಜನಸಾಗರಕ್ಕೆ ಜೀವನದಲ್ಲಿ ಶಾಂತಿ, ನೆಮ್ಮದಿ, ಧೈರ್ಯ, ತುಂಬಲು ತಾಯಿ ರೇಣುಕಾ ಯಲ್ಲಮ್ಮಾ ಇದ್ದಾಳೆ, ನಂಬಿದ ಭಕ್ತರನ್ನು ರಕ್ಷಿಸುತ್ತಾಳೆ ಎಂಬುದನ್ನು ಸಾರುವ ಕತೆ ಇದಾಗಿದೆ ಎಂದು ನಿರ್ದೇಶಕಿ ನಿರ್ಮಲಾ ಚನ್ನಪ್ಪ ಹೇಳಿದರು ಮತ್ತು ಯಲ್ಲಮ್ಮನ ದರ್ಶನ ಪಡೆಯುವ ಮೂಲಕ ಪ್ರಚಾರಕ್ಕೆ ಅಣಿಯಾಗಿದ್ದೇವೆ. ದೇವಿಯ ಆಶೀರ್ವಾದ ನಮ್ಮ ಚಿತ್ರ ತಂಡದ ಮೇಲಿರಲಿ ಲಕ್ಷಾಂತರ ಅಭಿಮಾನಿ ಭಕ್ತರು ನವಶಕ್ತಿ ದರ್ಶನ ನೋಡಿ ಹರಸಲಿ ಎಂದರು.
ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ್ರ ಮಳಗಿ, ಎಎಸ್‌ಐ ಎಸ್ ಆರ್ ಗಿರಿಯಾಲ, ಏಕನಗೌಡಾ ಮುದ್ದನಗೌಡ್ರ, ಮತ್ತು ಚಿತ್ರ ತಂಡ ಹಾಗೂ ದೇವಸ್ಥಾನ ಸಿಬ್ಬಂದಿ ಮತ್ತಿತರರು ಇದ್ದರು.
 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button