ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ– ಒಂದೇ ಸೂರಿನಡಿ ಹಲವಾರು ಸೇವೆಗಳನ್ನು ಒದಗಿಸುತ್ತಿರುವ ಜೊಲ್ಲೆ ಉದ್ಯೋಗ ಸಮೂಹವು ಸಾವಿರಾರು ಯುವಕರಿಗೆ ಇಂತಹ ಸಂಸ್ಥೆಗಳ ಹುಟ್ಟು ಹಾಕುವುದರ ಮೂಲಕ ಉದ್ಯೋಗ ಅವಕಾಶ ನೀಡಿದೆ.
ಗ್ರಾಹಕರಿಗೆ ಆರ್ಥಿಕ ಸೇವೆ, ಗೃಹೋಪಯೋಗಿ, ದಿನಸಿ ವಸ್ತುಗಳ ಮಾರಾಟ, ಶೈಕ್ಷಣಿಕ ಸೇವೆ, ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದೆ ಎಂದು ಉ. ಖಾನಾಪುರದ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿಗಳ ಹೇಳಿದರು.
ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಿಸಲಾದ ಜ್ಯೋತಿ ಸೋಸೈಟಿಯ ಶಾಖೆಯನ್ನು ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿಗಳು ಹಾಗೂ ಶ್ರೀ ರಾಚೋಟೆಶ್ವರ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿದರು.
ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗ ಮಹಾವೀರ ನಾಶೀಪುಡಿ, ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಹುಟ್ಟು ಹಬ್ಬದ ನಿಮಿತ್ಯ ಜ್ಯೋತಿ ವಿವಿಧ ಉದ್ದೇಶಗಳ ಸಹಕಾರಿ ಸಂಘ ನಿಯಮಿತದ ೫ ನೂತನ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ಸೊಸೈಟಿಯಿಂದ ಜಿಲ್ಲೆಯಾದ್ಯಂತ ವಿವಿಧೆಡೆ ೧೫ ಜ್ಯೋತಿ ಬಜಾರ ಶಾಖೆ, ಜ್ಯೋತಿ ಬಟ್ಟೆ ಅಂಗಡಿ, ಜ್ಯೋತಿ ಔಷಧ ಅಂಗಡಿ, ಆರ್ಥಿಕವಾಗಿ ಸೇವೆ ಸಲ್ಲಿಸುವ ಸದುದ್ದೇಶದಿಂದ ಗ್ರಾಹಕರಿಗೆ ಜ್ಯೋತಿ ಕ್ರೇಡಿಟ್ ವಿಭಾಗದ ೩೩ ಶಾಖೆಗಳನ್ನು ಪ್ರಾರಂಭಿಸಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಾ ಗ್ರಾಹಕರ ವಿಶ್ವಾಸನೀಯ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಜ್ಯೋತಿ ಸಂಸ್ಥೆಯ ನಿರ್ದೇಶಕರಾದ ಕಲ್ಲಪ್ಪ ನಾಯಿಕ, ಶ್ರೀಕಾಂತ ಚಗಲಾ, ವಿಲಾಸ ಕದಮ, ಅಣ್ಣಾಸಾಹೇಬ ಬೆಂಡವಾಡೆ, ರವೀಂದ್ರ ಕುರಾಡೆ, ಜಿವಪ್ಪಾ ಪಾಟೀಲ, ಮಾರುತಿ ಪಾಟೀಲ, ಸಂಸ್ಥೆಯ ಪಧಾಧಿಕಾರಿಗಳಾದ ವಿಜಯ ಖಡಕಭಾವಿ, ಸಂತೋಷ ಪಾಟೀಲ, ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ