Kannada NewsKarnataka NewsLatest

ಸಮುದಾಯ ಭವನಗಳಿಗೆ ಭೂಮಿ ಪೂಜೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ-  ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಸಾಕಷ್ಟು ಸೌಲಭ್ಯ ನೀಡಿದ್ದಾರೆ ಎಂದು ಮಾಜಿ ಜಿ.ಪಂ ಸದಸ್ಯ ಮಹೇಶ ಭಾತೆ ಹೇಳಿದರು.

ಗುರುವಾರ  ತಾಲೂಕಿನ ಬೆಳಕೂಡ ಗ್ರಾಮದ ಬಸವನಗರದಲ್ಲಿ   ಸಂಸದರ ಅನುದಾನದಡಿಯಲ್ಲಿ ಮಂಜೂರಾದ 5 ಲಕ್ಷ ರೂಗಳ ಸಮುದಾನ ಭವನ ನಿರ್ಮಾಣ ಕಾಮಗಾರಿಗೆ  ಚಾಲನೆ ನೀಡಿ ಅವರು ಮಾತನಾಡಿದರು.

Home add -Advt

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿನ ಪ್ರತಿ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪ್ರಾಮಾಣಿಕವಾದ ಪ್ರಯತ್ನ ನಡೆಸಿದ್ದಾರೆ ಎಂದರು. ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಇಲ್ಲಿನ ಜನಪ್ರತಿನಿಧಿಗಳು ಸಾಕಷ್ಟು ಅನುದಾನ ನೀಡಿದ್ದಾರೆ ಎಂದರು.

ಮುಖಂಡ ವಿಜಯ ಕೋಠೆವಾಲೆ ಮಾತನಾಡಿ ಮಡ್ಡಿ ಭಾಗದ ಜನರ ಸಮಸ್ಯೆಗೆ ಸ್ಪಂದನೆ ಮಾಡುವ ಕಾರ್ಯವನ್ನು ಇಲ್ಲಿನ ಸಂಸದರು ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರಾಯಬಾಗ ಬಿಜೆಪಿ ಮಂಡಲದ ಅಧ್ಯಕ್ಷ ಬಸವರಾಜ ಡೋಣವಾಡೆ ಮಾತನಾಡಿದರು. ವಿಠ್ಠಲ ಮಾಳಿ, ರಮೇಶ ಕಾಳನವರ, ಬಸವರಾಜ ಮಾಳಿ, ಸದಾಶಿವ ಹಳಂಗಳಿ, ರಾಜು ಹರಗನ್ನವರ, ಗಣಪತಿ ಮಾಳಿ, ರವಿ ದಾಮನ್ನವರ, ಮಲ್ಲಪ್ಪಾ ಅರಭಾವಿ ಉಪಸ್ಥಿತರಿದ್ದರು. ಲಕ್ಷಣ ಮಾಳಿ ನಿರೂಪಿಸಿದರು.

Related Articles

Back to top button