ಪ್ರಗತಿವಾಹಿನಿ ಸುದ್ದಿ; ರಾಯಚೂರು: ಬಹಿರ್ದೆಸೆಗೆಂದು ಹೋಗಿದ್ದ ವ್ಯಕ್ತಿ ಮಸ್ಕಿ ಹಳ್ಳದ ಮಧ್ಯೆ ಸಿಲುಕಿದ್ದು, ಅಗ್ನಿಶಾಮಕ ಸಿಬ್ಬಂದಿಗಲ ಕಣ್ಣೆದುರೇ ನೀರುಪಾಲಾಗಿರುವ ಘಟನೆ ನಡೆದಿದೆ.
ಭಾರಿ ಮಳೆಯಿಂದಾಗಿ ಮಸ್ಕಿ ಅಣೆಕಟ್ಟು ತುಂಬಿದ್ದು, ನಾಲ್ಕು ಗೇಟ್ ಗಳ ಮೂಲಕ ಜಲಾಶಯದಿಂದ ನೀರು ಹೊರಬಿಡಲಾಗಿದೆ. ಪರಿಣಾಮ ಮಸ್ಕಿ ಹಳ್ಳದಲ್ಲಿ ಕ್ಷಣಾರ್ಧದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಬಹಿರ್ದೆಸೆಗೆಂದು ಹೋದ ಇಬ್ಬರು ವ್ಯಕ್ತಿಗಳು ಹಳ್ಳದ ಮಧ್ಯೆಯೇ ಸಿಲುಕಿಕೊಂಡಿದ್ದು, ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯದಿಂದ ಇಬ್ಬರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಹಗ್ಗ ಕೈತಪ್ಪಿದ ಪರಿಣಾಮ ಚನ್ನಬಸವ ಎಂಬಾತ ನೋಡ ನೋಡುತ್ತಿದ್ದಂತೆಯೇ ನೀರುಪಾಲಾಗಿದ್ದಾನೆ. ಇಬ್ಬರ ರಕ್ಷಣೆಗಾಗಿ ಅಗ್ನಿಶಾಮಕ ಸಿಬ್ಬಂದಿ ಪರದಾಟ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ