ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶಿಕ್ಷಕರಿಗೆ ದಸರಾ ರಜೆ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮೂರು ವಾರಗಳ ಮಧ್ಯಂತರ ರಜೆ ಘೋಷಿಸಲಾಗಿದೆ.
ಶಿಕ್ಷಕರಿಗೆ ದಸರಾ ರಜೆ ನೀಡಲು ಸರಕಾರ ಚಿಂತನೆ ಎನ್ನುವ ವರದಿಯನ್ನು ಪ್ರಗತಿವಾಹಿನಿ ಮಾತ್ರ ಪ್ರಕಟಿಸಿತ್ತು. ನಿನ್ನೆ ಪ್ರಕಟವಾದ ಈ ವರದಿ ನಿಜವಾಗಿದೆ.
ಅಕ್ಟೋಬರ್ 30ರ ವರೆಗೆ ಶಿಕ್ಷಕರಿಗೆ ದಸರಾ ರಜೆ ಘೋಷಿಸಲಾಗಿದೆ. ವಿದ್ಯಾಗಮ ಯೋಜನೆ ಹಿನ್ನೆಲೆಯಲ್ಲಿ ಮಧ್ಯಂತರ ರಜೆ ರದ್ಧುಗೊಳಿಸಲು ಸರಕಾರ ನಿರ್ಧರಿಸಿತ್ತು. ಈಗ ವಿದ್ಯಾಗಮ ಯೋಜನೆ ರದ್ದಾಗಿದ್ದರಿಂದ ಶಿಕ್ಷಕರಿಗೆ ರಜೆ ನೀಡಲಾಗಿದೆ.
ಪ್ರಗತಿವಾಹಿನಿ ನಿನ್ನೆ ಪ್ರಕಟಿಸಿದ್ದ ವರದಿ –
ಶಿಕ್ಷಕರಿಗೆ ದಸರಾ ರಜೆ ನೀಡಲು ಸರಕಾರ ಚಿಂತನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ