Karnataka NewsLatest

ಮಗನನ್ನು ಎಂಪಿ ಚುನಾವಣೆಗೆ ನಿಲ್ಲಿಸ್ತಾರಾ?: ರಮೇಶ ಜಾರಕಿಹೊಳಿ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಂಬರುವ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಪುತ್ರ ಅಮರನಾಥ ಜಾರಕಿಹೊಳಿ ಸ್ಪರ್ಧಿಸುತ್ತಾರಾ?

ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಭಾರಿ ವೈರಲ್ ಆಗಿತ್ತು. ಅಮರನಾಥ ಜಾರಕಿಹೊಳಿ ಮುಂದಿನ ಬಿಜೆಪಿ ಅಭ್ಯರ್ಥಿಯಾಗಲಿ. ಗೆಲುವಿನ ಅಂತರದ ಗುರಿ  5 ಲಕ್ಷ ಮತ ಎನ್ನುವ ಪೋಸ್ಟ್ ಹರಿದಾಡುತ್ತಿದೆ. ಅನೇಕ ಕಡೆಯಿಂದ ಅವರಿಗೆ ಬೆಂಬಲ ಸೂಚಿಸುವ ಪೋಸ್ಟ್ ಗಳು ಕೂಡ ಬರುತ್ತಿವೆ.

ಈ ಕುರಿತು ಪ್ರಗತಿವಾಹಿನಿ ರಮೇಶ ಜಾರಕಿಹೊಳಿ ಅವರನ್ನು ಸಂಪರ್ಕಿಸಿದಾಗ, ಮಗ ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದೆಲ್ಲ ಬೋಗಸ್ ಎಂದರು.

ಮಗ ಇನ್ನೂ ಸಣ್ಣವನು ಯಾವುದೇ ಕಾರಣದಿಂದ ಅವನನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುವುದಿಲ್ಲ ಎಂದರು.

ನಾವೆಲ್ಲ ಕಷ್ಟಪಟ್ಟು, ಹೋರಾಟ ಮಾಡಿ ಮೇಲೆ ಬಂದವರು. ಯಾರೂ ಮನೆಯಲ್ಲಿ ಮಲಗಿಕೊಂಡು ಮೇಲೆ ಬಂದಿಲ್ಲ. ಅವನನ್ನು ಇಷ್ಟು ಬೇಗ ಚುನಾವಣೆಗೆ ನಿಲ್ಲಿಸುವುದಿಲ್ಲ. ನಮ್ಮ ಬೆಂಬಲ ಏನಿದ್ದರೂ ಸುರೇಶ ಅಂಗಡಿ ಅವರ ಪತ್ನಿಗೆ. ಅವರನ್ನೇ ಚುನಾವಣೆಗೆ ನಿಲ್ಲಿಸುತ್ತೇವೆ ಎಂದೂ ಅವರು ತಿಳಿಸಿದರು.

ಮಗನನ್ನು ಇಷ್ಟು ಬೇಗ ಬೆಳೆಸುವ ಯೋಚನೆ ಇದ್ದಿದ್ದರೆ ಬೆಳಗಾವಿ ಹಾಲು ಒಕ್ಕೂಟದ ಚೇರಮನ್ ಮಾಡಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿಯೇ ಮಾಡಿಲ್ಲ. ಅವನಿಗೆ ಇನ್ನೂ ವಯಸ್ಸಿದೆ. ಈಗಂತೂ ಚುನಾವಣೆಗೆ ನಿಲ್ಲಿಸುವುದಿಲ್ಲ. ಅದೆಲ್ಲ ಸುಳ್ಳು ಸುದ್ದಿ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಈ ಸುದ್ದಿಯನ್ನೂ ಓದಿ –

ಯಾರಾಗಲಿದ್ದಾರೆ ಬೆಳಗಾವಿ MP? : ಸೋಶಿಯಲ್ ಮೀಡಿಯಾದಲ್ಲಿ ಜೋರಾದ ಯುವ ಹವಾ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button