Kannada NewsKarnataka NewsLatest

ಎಸ್‌ಜಿವಿ ಮಹೇಶ ಪಿಯು ಕಾಲೇಜಿನಲ್ಲಿ ಸ್ಟಡಿ ಮಟಿರಿಯಲ್ಸ್ ಬಿಡುಗಡೆ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಎಸ್ ಜಿ ವಿ ಮಹೇಶ ಪಿಯುಸಿ ಕಾಲೇಜಿನಲ್ಲಿ ಸೋಮವಾರ ಸ್ಟಡಿ ಮಟಿರಿಯಲ್ಸ್  ಬಿಡುಗಡೆ ಸಮಾರಂಭ ನಡೆಯಿತು.

ಕೆ ಎಲ್ ಇ ಸಂಸ್ಥೆಯ ಎಂ ಬಿ ಎ ವಿಭಾಗದ ಮುಖ್ಯಸ್ಥ ಡಾ. ಡಿ ಜಿ ಕುಲಕರ್ಣಿ  ಸ್ಟಡಿ ಮಟಿರಿಯಲ್ಸ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಜ್ಞಾನಾರ್ಜನೆಗೆ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ, ಅಷ್ಟೇ ಪಾಲಕರ ಪಾತ್ರ ಕೂಡಾ ಮುಖ್ಯ ಎಂದರು.

ಪಾಲಕರು ಕೂಡ ಮಕ್ಕಳ ಓದಿಗೆ ಸ್ಪೂರ್ತಿದಾಯಕವಾದ ವಾತಾವರಣ ರೂಪಿಸುವುದು ಬಹಳ ಮುಖ್ಯ. ಅದರಲ್ಲೂ ಇಂದಿನ ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣಕ್ಕೆ ಹೊಂದಿಕೊಳ್ಳಬೇಕಾದದ್ದು ಅನಿವಾರ್ಯ. ಹಾಗಾಗಿ ಮನೆಯಲ್ಲಿಯೇ ಓದುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದರು.
ವರ್ಚುವಲ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಎಸ್‌ಜಿವಿ ಮಹೇಶ ಪಿಯು ಕಾಲೇಜಿನ  ಪ್ರಾಚಾರ್ಯ ಎಂ ವಿ ಭಟ್ಟ ಮಾತನಾಡಿ, ಎಸ್ ಜಿ ವಿ ಮಹೇಶ ಪಿ ಯು ಸಿ ಕಾಲೇಜು, ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಉತ್ತಮ ವೇದಿಕೆ ಒದಗಿಸಿ ಕೊಟ್ಟಿದೆ. ವಿದ್ಯಾರ್ಥಿಗಳು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ದೀಪ ಬೆಳಗುವುದರ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ವಿವಿಧ ವಿಷಯವಾರು ಸ್ಟಡಿ ಮಟಿರಿಯಲ್ಸ್  ಬಿಡುಗಡೆ ಮಾಡಲಾಯಿತು. ಈ ಪುಸ್ತಕಗಳ ಕುರಿತು ಭೌತಶಾಸ್ತ್ರ ವಿಷಯದ ಮುಖ್ಯಸ್ಥ  ಸುನೀಲ ವೈಕುಂಠೆ,  ರಸಾಯನ ಶಾಸ್ತ್ರ ಮುಖ್ಯಸ್ಥ  ಪ್ರಸನ್ನ ಹೆಗಡೆ, ಗಣಿತಶಾಸ್ತ್ರ ಮುಖ್ಯಸ್ಥ  ಆನಂದ ಖೋತ್ ಹಾಗೂ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ  ಸ್ಮಿತಾ ಪವಾರ ಮಾಹಿತಿ ನೀಡಿದರು.
ಇನ್ನೊವೇಟಿವ್ ಎಂದು ಹೆಸರಿಸಲಾದ ಪುಸ್ತಕದ ಕುರಿತು ಮಾಹಿತಿ ನೀಡಿದ ಎಲ್ಲ ಉಪನ್ಯಾಸಕರು, ಹೊಸ ರೀತಿಯ ಜ್ಞಾನದ ವಿಷಯಗಳ ಹುಡುಕಾಟದಲ್ಲಿ ಎಸ್ ಜಿ ವಿ ಮಹೇಶ ಕಾಲೇಜು ಯಾವಾಗಲು ಸದಾ ಮುಂದಿರುತ್ತದೆ, ಪ್ರಸಕ್ತ ದಿನಮಾನದಲ್ಲಿ ವಿದ್ಯಾರ್ಥೀಗಳ ಸ್ಪರ್ಧಾತ್ಮಕತೆಗೆ ಗ್ಗಿಕೊಳ್ಳುವ ಅನೇಕ ರೀತಿಯ ಹುಡುಕಾಟಕ್ಕೆ ತೆರೆದುಕೊಳ್ಳುತ್ತದೆ.  ಸೃಜನಶೀಲ ಹುಡುಕಾಟವೇ ಇಂದಿನ ವರ್ಣರಂಜಿತ ಪ್ರಪಂಚವನ್ನು ನಿರ್ಮಿಸಿದೆ. ಆ ಕಾರಣಕ್ಕೆ ಈ ಹೆಸರನ್ನಿಡಲಾಗಿದೆ ಎಂದು ಹೇಳಿದರು.
ಹಿರಿಯ ಉಪನ್ಯಾಸಕರಾದ  ಮುಕುಂದ ಗೋಖಲೆ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕ ಅಭಿಜಿತ ಹಣಗೋಡಿಮಠ ವಂದಿಸಿದರು. ಆನಲೈನ್ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು.  ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕಗಳನ್ನು ತಲುಪಿಸಲಾಯಿತು.  ಸ್ಮೀತಾ ಪವಾರ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button