ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸೋಮವಾರ ಬೆಳಗಾವಿಗೆ ಆಗಮಿಸಿದ್ದ 3 ವಿಮಾನಗಳು ಹವಾಮಾನ ವೈಪರಿತ್ಯದಿಂದಾಗಿ ಲ್ಯಾಂಡ್ ಆಗಲಾರದೆ ವಾಪಸ್ ಹೋಗಿವೆ.
ಬೆಳಗಾವಿ ವಿಮಾನ ನಿಲ್ದಾಣ ಪ್ರದೇಶದಲ್ಲಿ ಭಾರಿ ಮಳೆ ಮತ್ತು ದಟ್ಟವಾದ ಮೋಡಕವಿದ ವಾತಾವರಣವಿದೆ. ಇದರಿಂದಾಗಿ ರನ್ ವೇ ಕಾಣದೆ ಸ್ವಲ್ಪ ಹೊತ್ತು ಆಕಾಶದಲ್ಲೇ ಹಾರಾಡಿದ ವಿಮಾನಗಳು ನಂತರ ಅನಿವಾರ್ಯವಾಗಿ ಮರಳಿ ಹೋಗಿವೆ.
ಹೈದರಾಬಾದ್ ನಿಂದ ಬಂದಿದ್ದ ವಿಮಾನ ಮಾತ್ರ ಹುಬ್ಬಳ್ಳಿಗೆ ಹೋಗಿ ಲ್ಯಾಂಡ್ ಆಗಿದೆ. ತಿರುಪತಿ ಮತ್ತು ಬೆಂಗಳೂರು ವಿಮಾನಗಳು ವಾಪಸ್ ತೆರಳಿವೆ.
ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಕೂಡ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಹಾಗಾಗಿ ಮಂಗಳವಾರವೂ ವಿಮಾನ ಸಂಚಾರ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ