ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ – ಇಲ್ಲಿಯ ಮುರುಘಾ ಮಠದಲ್ಲಿ ನಡೆಯುತ್ತಿದ್ದ ಶರಣ ಸಂಸ್ಕೃತಿ ಉತ್ಸವದಲ್ಲಿ ಸೋಮವಾರ ಅನುಭವ ಮಂಟಪದಲ್ಲಿ ಮಕ್ಕಳ ಗೋಷ್ಠಿ ನಡೆಯಿತು.
ಕಾರ್ಯಕ್ರಮದ ಸಮ್ಮುಖವನ್ನು ಚಿತ್ರದುರ್ಗದ ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ನೋಡಿ, ಮಕ್ಕಳು ತಮ್ಮ ವಯಸ್ಸಿಗೆ ಮೀರಿದ ಸಾಧನೆಯನ್ನು ಹೊಗಳಿದರು.
ಜನರು ಕೋರೋನದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಹೇಳಿದರು.
ನಂತರ ಚನ್ನಗಿರಿಯ ಜೀ ಟಿವಿ ಸರಿಗಮಪ ಪ್ರತಿಭೆ ಚಿ.ತೇಜಸ್, ಜೀ ಟಿವಿ ಸರಿಗಮಪ ಅತ್ಯಂತ ಕಿರಿಯ ಪ್ರತಿಭೆ ಚಿ.ಜ್ಞಾನ, ಕಲರ‍್ಸ್ ಕನ್ನಡ ಟಿವಿ- ಕನ್ನಡ ಕೋಗಿಲೆ ಪ್ರತಿಭೆ ಚಿ.ಅರ್ಜುನ್ ಇಟಗಿ ಮತ್ತು ಚನ್ನಗಿರಿಯ ಜೀ ಟಿವಿ ಸರಿಗಮಪ ಪ್ರತಿಭೆ ಕು. ರುಬೀನಾ ಹು ನದಾಫ ರವರಿಂದ ಸುಗಮ ಸಂಗೀತ, ಬೆಂಗಳೂರಿನ ಜೀ. ಕನ್ನಡ ಕನ್ಮಣಿ ಪ್ರತಿಭೆ ಚಿ. ಸಾನಿಕಾ ಎಂ.ಪಿ.ಯವರಿಂದ ಭಾಷಣ, ಬೆಂಗಳೂರು ಜೀ ಟಿವಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಅವಾರ್ಡ್ ವಿಜೇತ ಪ್ರತಿಭೆ ಚಿ. ಅನುಷ, ಕು. ಡಿಂಪನಾ ಮತ್ತು ಸೊರಬ ತೆಲುಗು ರಿಯಾಲಿಟಿ ಶೋ ವಿಜೇತೆ ಕು. ಮಹಾಲಕ್ಷ್ಮಿ ರವರಿಂದ ನೃತ್ಯ, ಬೆಂಗಳೂರಿನ ರುದ್ರಾ ಡ್ಯಾನ್ಸ್ ಕಂಪನಿಯವರಿಂದ ಸಾಹಸ ಮತ್ತು ಸಮೂಹ ನೃತ್ಯವನ್ನು ನಡೆಸಿಕೊಟ್ಟರು.
ಶರಣ ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷರಾದ ಜ. ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಹಾಗೂ ಮುರುಘಾ ಶರಣರು ಉಪಸ್ಥಿತರಿದ್ದರು.
ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ; ದಸರಾ ಮೆರವಣಿಗೆಗೆ ಚಾಲನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ