ಪ್ರಗತಿವಾಹಿನಿ ಸುದ್ದಿ, ಮುನವಳ್ಳಿ – ಮುನವಳ್ಳಿ ಪುರಸಭೆಯ ಇಂಜಿನಿಯರ್ ಒಬ್ಬರು ಇಂದು ಎಸಿಬಿ ಬಲೆಗೆ ಬಿದ್ದಿದ್ದಾರೆ .
ಪುರಸಭೆಯ ಕಿರಿಯ ಇಂಜಿನಿಯರ್ ವೆಂಕಪ್ಪ ಕಾಮಣ್ಣವರ ಅವರನ್ನು ಲಂಚ ಸ್ವೀಕರಿಸುತ್ತಿರುವಾಗಲೇ ಲಂಚದ ಹಣದ ಸಮೇತ ರೆಡ್ ಹ್ಯಾಂಡ್ ಆಗಿ ಎಸಿಬಿ ಪೊಲೀಸರು ಬಂಧಿಸಿದ್ದಾರೆ.
ದುರ್ಗಪ್ಪ ಕಿನ್ನೂರಿ ಎಂಬ ಗುತ್ತಿಗೆದಾರರ ಕಾಮಗಾರಿಯ ಬಿಲ್ ಪಾವತಿ ಮಾಡುವ ಸಲುವಾಗಿ ವೆಂಕಪ್ಪ ಕಾಮಣ್ಣವರ ಅವರು 1.40 ಲಕ್ಷ ರುಪಾಯಿಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು . ಆ ಪೈಕಿ
ಮೊದಲು 60 ಸಾವಿರ ರೂಪಾಯಿಗಳನ್ನು ನೀಡಲಾಗಿತ್ತು .ಇಂದು ಇನ್ನುಳಿದ 80 ಸಾವಿರ ರೂಪಾಯಿಗಳನ್ನು ದುರ್ಗಪ್ಪ ಕಿನ್ನೂರಿ ಅವರಿಂದ ಸ್ವೀಕರಿಸುತ್ತಿರುವಾಗಲೇ ರೆಡ್ ಹ್ಯಾಂಡಾಗಿ ಲಂಚದ ಹಣದ ಸಮೇತ ವೆಂಕಪ್ಪ ಕಾಮಣ್ಣವರ ಅವರನ್ನು ಎಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ .
ಎಸಿಬಿ ಡಿಎಸ್ಪಿ ಮಹಾಂತೇಶ್ವರ ಜಿದ್ದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಎಸಿಬಿ ಇನ್ ಸ್ಪೆಕ್ಟರ್ ಗಳಾದ ಎ ಎಸ್ ಗುದಿಗೊಪ್ಪ ಮತ್ತು ಸುನೀಲ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು .
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ