ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತ-ಚೀನಾ ಗಡಿ ಬಿಕ್ಕಟ್ಟು ಹೆಚ್ಚಿದ ಬೆನ್ನಲ್ಲೇ ನಿಷೇಧಕ್ಕೊಳಗಾಗಿದ್ದ ಪಬ್ ಜಿ ಗೇಮ್ ಇದೀಗ ಮತ್ತೆ ಮರಳಿದೆ. ಯುವಜನತೆಯ ಫೆವರಿಟ್ ಗೇಮ್ ಆಗಿದ್ದ ಪಬ್ ಜಿ ಗೇಮ್ ನ್ನು ಬ್ಯಾನ್ ಮಾಡುವ ಮೂಲಕ ಭಾರತ, ಚೀನಾದ ವಿರುದ್ಧ ಮತ್ತೊಂದು ಡಿಜಿಟಲ್ ಸ್ಟ್ರೈಕ್ ಸಾರಿತ್ತು.
ಇದೀಗ ಪಬ್ ಜಿ ಗೇಮ್ ಹೊಸ ಅವತಾರದಲ್ಲಿ ಮರಳುತ್ತಿದ್ದು, ಭಾರತೀಯರಿಗಾಗಿಯೇ ಪಬ್ ಜಿ ಮೊಬೈಲ್ ಇಂಡಿಯಾ ಎಂಬ ಹೆಸರಲ್ಲಿ ಹೊಸ ಆಪ್ ಅಭಿವೃದ್ಧಿಯಾಗುತ್ತಿದೆ. ಸೌತ್ ಕೊರಿಯಾದ ಕ್ರ್ಯಾಫ್ಟನ್ ಇಂಕ್ ನ ಅಂಗಸಂಸ್ಥೆಯಾದ ಪಬ್ ಜಿ ಕಾರ್ಪೊರೇಷನ್ ಈ ಬಗ್ಗೆ ಘೋಷಣೆ ಮಾಡಿದೆ.
ಭಾರತೀಯರಿಗಾಗಿಯೇ ಪಬ್ ಜಿ ಮೊಬೈಲ್ ಇಂಡಿಯಾ ಗೇಮ್ ಆಪ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದಕ್ಕಾಗಿಯೇ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಈ ಗೇಮ್ ಲಭ್ಯವಾಗಲಿದೆ ಎಂದು ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ