ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಉಳವಿ ಚನ್ನಬಸವೇಶ್ವರ ಗೆಳೆಯರ ಬಳಗದಿಂದ ಶ್ರೀ ಬಸವರಾಜ ಹೈಬತ್ತಿ ನಿವೃತ್ತ ಸೈನಿಕರು(ಕಿತ್ತೂರು ಹುಲಿ) ನೇತೃತ್ವದಲ್ಲಿ 5 ಕಿಲೋಮೀಟರ್, 3 ಕಿಲೋಮೀಟರ್, 1 ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಬೇರೆಬೇರೆ ಗ್ರಾಮಗಳಿಂದ ನೂರಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ನಿವೃತ್ತಿ ಹೊಂದಿದ ಡಾಕ್ಟರ ಮೋಹನ ಅಂಗಡಿಯವರು ಮಾತನಾಡಿ ಭಾರತೀಯ ಸೇನೆಯಲ್ಲಿ ಹೆಚ್ಚು ಹೆಚ್ಚು ಯುವಕರು ಸೇರ್ಪಡೆಯಾಗಿ ಒಳ್ಳೆಯ ಹುದ್ದೆಗಳನ್ನು ಅಲಂಕರಿಸುವಂತಾಗಲಿ ಎಂದು ಹಾರೈಸಿದರು.
ದೈಹಿಕ ಶಿಕ್ಷಕರಾದ ಕಲ್ಮೇಶ್ ಹೈಬತ್ತಿ ಸ್ವಾಗತ ಭಾಷಣ ಮಾಡಿದರು ರುದ್ರಪ್ಪ ರಾಮಣ್ಣವರ ಮಾತನಾಡಿ ಯುವಕರನ್ನು ಹುರಿದುಂಬಿಸಿದರುರಾಜು ಹೈಬತ್ತಿ ಮಾತನಾಡಿ ಗ್ರಾಮೀಣ ಯುವಪ್ರತಿಭೆಗಳನ್ನು ಬೆಳಕಿಗೆ ತರುವ ಕಾರ್ಯಕ್ರಮ ಇದಾಗಿದೆ ಎಂದರು.
ನಂತರ ಎಲ್ಲ ಸ್ಪರ್ಧಾಳುಗಳಿಗೆ ಪ್ರಶಸ್ತಿ ವಿತರಿಸಲಾಯಿತು ಈ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ಕಲ್ಮೇಶ್ ಹೈಬತ್ತಿ ಹಾಗೂ ಬಸವರಾಜ್ ಹುಲ್ಲೂರ್ ಗುರುಗಳು ಈ ಸ್ಪರ್ಧೆಯನ್ನು ಯಶಸ್ವಿಯಾಗಿ ನೆರವೇರಿಸಿ ಕೊಟ್ಟರು ಶಿವಾನಂದ ಮಾರಿಹಾಳ, ರುದ್ರಪ್ಪ ಕೇದಾರಿ, ಶಂಕರ್ ಇಂಚಲ, ಸಣ್ಣಪ್ಪ ರಾಮರಾವ, ಖಂಡು ಹೈಬತ್ತಿ, ಕೆಂಪೇಶ ಕುಂಬಾರ, ಮುದುಕಪ್ಪ ದಿಬ್ಬದ, ಸಿದ್ದಲಿಂಗಪ್ಪ ರಾಮಣ್ಣವರ , ಈಶ್ವರ ಬಡಿಗೇರ, ಅಪ್ಪಯ್ಯ ಮಾರಿಹಾಳ, ರುದ್ರಪ್ಪ ಹೈಬತ್ತಿ, ಹಾಗೂ ಗ್ರಾಮದ ಅನೇಕ ನಾಗರಿಕರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ