ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಯುವತಿಯೊಬ್ಬಳು ಮೊಬೈಲ್ ಅಂಗಡಿಯೊಂದರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿರುವ ಘಟನೆ ಈಶಾನ್ಯ ದೆಹಲಿಯ ಚೌಹಾಣ್ ಬಂಗಾರು ಪ್ರದೇಶದಲ್ಲಿ ನಡೆದಿದೆ.
28 ವರ್ಷದ ಯುವತಿ ಅಂಗಡಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಧ್ಯ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ.
ಯುವತಿ ನ.18ರಂದು ಅಂಗಡಿಯಲ್ಲಿ ಮೊಬೈಲ್ ಖರೀದಿಸಿದ್ದು, ಈ ವೇಳೆ ಅಂಗಡಿ ಮಾಲೀಕ ಹಾಗೂ ಯುವತಿ ನಡುವೆ ಜಗಳವಾಗಿ ಮಾತಿನಚಕಮಕಿಯುಂಟಾಗಿದೆ. ಇದೇ ಕಾರಣಕ್ಕೆ ಯುವತಿ ಗುಂಡಿನ ದಾಳಿ ನಡೆಸಿದ್ದಾಳೆ. ಮಧ್ಯದ ಅಮಲಲ್ಲಿ ಯುವತಿ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ