ಪ್ರಗತಿವಾಹಿನಿ ಸುದ್ದಿ; ಮಾಸ್ಕೋ: ವ್ಯಕ್ತಿಯೊಬ್ಬರ ಮೂಗಿನಲ್ಲಿ ಸಿಲುಕಿದ್ದ ನಾಣ್ಯವನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ 50 ವರ್ಷಗಳ ಬಳಿಕ ಹೊರತೆಗೆದ ಘಟನೆ ರಷ್ಯಾದಲ್ಲಿ ನಡೆದಿದೆ.
59 ವರ್ಷದ ವೃದ್ಧ 6 ವರ್ಷದ ಬಾಲಕನಾಗಿದ್ದಾಗ ನಾಣ್ಯವೊಂದು ಮೂಗಿನಲ್ಲಿ ಹೋಗಿತ್ತು. ಬಲ ಮೂಗಿನ ಹೊಳ್ಳೆಯಲ್ಲಿ ನಾಣ್ಯ ಸಿಲುಕಿಕೊಂಡಿದೆ. ಆದರೆ ಮನೆಯಲ್ಲಿ ಬಯ್ಯುವ ಭಯಕ್ಕೆ ಬಾಲಕ ವಿಷಯ ಮುಚ್ಚಿಟ್ಟಿದ್ದಾನೆ. ಹೀಗೆ ಬರೋಬ್ಬರಿ 50 ವರ್ಷಗಳು ಕಳೆದು ಬಾಲಕ ವೃದ್ಧನಾಗಿದ್ದಾನೆ.
ಇತ್ತೀಚೆಗೆ ಉಸಿರಾಟದ ತೊಂದರೆ ತೀವ್ರಗೊಳ್ಳುತ್ತಿದ್ದಂತೆ ಸ್ಕ್ಯಾನ್ ಮಾಡಿಸಿದಾಗ ನಾಣ್ಯವಿರುವುದು ಪತ್ತೆಯಾಗಿದೆ. ಇದೀಗ ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯರು ಮೂಗಿನಲ್ಲಿ ಸಿಲುಕಿದ್ದ ಸೋವಿಯತ್ ಒನ್ ಕೊಪೆಕ್ ನಾಣ್ಯವನ್ನು ಹೊರತೆಗೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ