Latest

ಕೊರೊನಾ ವ್ಯಾಕ್ಸಿನ್ ನಿಂದ ನರದೌರ್ಬಲ್ಯ: 5 ಕೋಟಿ ಪರಿಹಾರ ಕೊಡಿ

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಕೊರೊನಾ ವ್ಯಾಕ್ಸಿನ್ ನಿಂದ ತನಗೆ ನರದೌರ್ಬಲ್ಯವುಂಟಾಗಿದೆ ಎಂದು ವ್ಯಕ್ತಿಯೊಬ್ಬ 5 ಕೋಟಿ ರೂ ಪರಿಹಾರ ನೀಡುವಂತೆ ಮೊಕದ್ದಮೆ ದಾಖಲಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈ ಮೂಲದ 40 ವರ್ಷದ ಉದ್ಯಮಿ, ಆಕ್ಸಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜನಿಕಾ ಸಿದ್ಧಪಡಿಸಿರುವ ಕೊರೊನಾ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದರು.

ಇದೀಗ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ತನಗೆ ನರದೌರ್ಬಲ್ಯ ಕಾಣಿಸಿಕೊಂಡಿದ್ದು, 5 ಕೋಟಿ ರೂ ನಷ್ಟ ಭರ್ತಿ ಮಾಡುವಂತೆ ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button