ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಕ್ರಿಕೆಟ್ ಬೆಟ್ಟಿಂಗ್ ಗಾಗಿ ಮಗನೊಬ್ಬ ತನ್ನ ತಾಯಿ ಹಾಗೂ ತಂಗಿಯನ್ನೇ ವಿಷವುಣಿಸಿ ಹತ್ಯೆಗೈದ ಘಟನೆ ತೆಲಂಗಾಣದ ಮೆಡಚಲ್ ಮಲಕಾಜಗಿರಿಯಲ್ಲಿ ನಡೆದಿದೆ.
ಆರೋಪಿಯನ್ನು ಎಂ.ಟೆಕ್ ವಿದ್ಯಾರ್ಥಿ 23 ವರ್ಷದ ಸಾಯಿನಾಥ್ ಎಂದು ಗುರುತಿಸಲಾಗಿದೆ. ಸುನಿತಾ (44) ಅನುಜಾ (22) ಮೃತ ದುರ್ದೈವಿಗಳು. ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಸಾಯಿನಾಥ್, ತಾಯಿಯ ಖಾತೆಯಿಂದ 20 ಲಕ್ಷ ರೂ ಡ್ರಾ ಮಾಡಿ ಬೆಟ್ಟಿಂಗ್ ನಲ್ಲಿ ಕಳೆದುಕೊಂಡಿದ್ದ. ಹಣ ಸಾಲದಿದ್ದಾಗ ಮನೆಯಲ್ಲಿದ್ದ 150 ಗ್ರಾಂ ಚಿನ್ನ ಕದ್ದು ಅದನ್ನೂ ಜೂಜಾಟಕ್ಕೆ ಉಪಯೋಗಿಸಿ ಕಳೆದುಕೊಂಡಿದ್ದಾನೆ.
ವಿಷಯ ಗೊತ್ತಾಗುತ್ತಿದ್ದಂತೆಯೇ ತಾಯಿ ಹಾಗೂ ತಂಗಿ ಗಲಾಟೆ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಸಾಯಿನಾಥ್ ಊಟದಲ್ಲಿ ವಿಷ ಬೆರಸಿ ತಾಯಿ ಹಾಗೂ ತಂಗಿಗೆ ನೀಡಿದ್ದಾನೆ. ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಇಬ್ಬರ ಸ್ಥಿತಿ ನೋಡಲಾಗದೇ ಆಸ್ಪತ್ರೆಗೂ ದಾಖಲಿಸಿದ್ದಾನೆ. ಆದರೆ ಇಬ್ಬರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ