ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ವಿವಿಧ ಕಾರಣಗಳಿಗಾಗಿ ರಾಜ್ಯದ 27 ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ಚುನಾವಣೆ ಆಯೋಗ ತಡೆಹಿಡಿದಿದೆ.
ಜೊತೆಗೆ ದತ್ತ ಜಯಂತಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಚುನಾವಣೆ ದಿನಾಂಕವನ್ನು ಬದಲಿಸಲಾಗಿದೆ. ಚಿಕ್ಕಮಗಳೂರಿನ ಎಲ್ಲ ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ಮೊದಲ ಹಂತದಲ್ಲೇ ಅಂದರೆ, ಡಿಸೆಂಬರ್ 22ರಂದೇ ನಡೆಸಲಾಗುವುದು.
ರಾಜ್ಯದ 26 ಗ್ರಾಮ ಪಂಚಾಯಿತಿಗಳನ್ನು ಸರಕಾರ ಮೇಲ್ದರ್ಜೆಗೇರಿಸುತ್ತಿರುವುದರಿಂದ ಅವುಗಳ ಚುನಾವಣೆಯನ್ನು ರದ್ದುಪಡಿಸಲಾಗಿದೆ. ಅಲ್ಲದೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯಿತಿಗಿ ಸೇನಾಪುರ ಸೇರಿಸಿರುವುದರ ವಿರುದ್ಧ ಪ್ರಾದೇಶಿಕ ಆಯುಕ್ತರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿರುವುದರಿಂದ ಅಲ್ಲೂ ಚುನಾವಣೆ ಈಗ ನಡೆಯುವುದಿಲ್ಲ.
ಬೆಂಗಳೂರು ನಗರ ಜಿಲ್ಲೆಯ 5, ಗ್ರಾಮಾಂತರ ಜಿಲ್ಲೆಯ 1, ಬೆಳಗಾವಿ ಜಿಲ್ಲೆಯ 4, ಉತ್ತರ ಕನ್ನಡ ಜಿಲ್ಲೆಯ 4, ರಾಯಚೂರು ಹಾಗೂ ದಕ್ಷಿಣ ಕನ್ನಡದ ತಲಾ 3, ದಾವಣಗೆರೆಯ 2, ಉಡುಪಿಯ 1, ಕೋಲಾರದ 4 ಪಂಚಾಯಿತಿಗಳ ಚುನಾವಣೆ ರದ್ದು ಮಾಡಲಾಗಿದೆ. ಇವೆಲ್ಲ ಮೇಲ್ದರ್ಜೆಗೇರಲಿವೆ.
ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – 20201205135556107
(ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ