Latest

ಖಾಸಗಿ ವಾಹನ ಚಾಲಕರಿಗೆ ಸಾರಿಗೆ ನೌಕರರ ಎಚ್ಚರಿಕೆ; ಬಸ್ ಗಳು ರಸ್ತೆಗಿಳಿಯಲು ಬಿಡುವುದಿಲ್ಲ ಎಂದ ಹೋರಾಟಗಾರರು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ನಾಳೆಯಿಂದ ಖಾಸಗಿ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲು ಸರ್ಕಾರ ಮುಂದಾಗಿರುವ ಬೆನ್ನಲ್ಲೇ ಮುಷ್ಕರ ನಿರತ ನೌಕರರ ಆಕ್ರೋಶ ಭುಗಿಲೆದ್ದಿದ್ದು, ಖಾಸಗಿ ವಾಹನಗಳು ರಸ್ತೆಗಿಳಿಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಬಸ್ ನಿಲ್ದಾಣದಲ್ಲಿ ಮಾತನಾಡಿದ ಮುಷ್ಕರ ನಿರತ ಸಿಬ್ಬಂದಿ, ನಾಳೆ ಬೆಳಗಾವಿಯಲ್ಲಿ ಯಾವುದೇ ಖಾಸಗಿ ಬಸ್ ಸಂಚಾರಕ್ಕೂ ಅವಕಾಶ ನೀಡಲ್ಲ. ಒಂದು ವೇಳೆ ಖಾಸಗಿ ಬಸ್ ಗಳ ಓಡಾಟ ಆರಂಭವಾದರೆ ಕಲ್ಲು ತೂರಾಟದಂತಹ ಘಟನೆ ನಡೆದು, ಬಸ್ ಗಳಿಗೆ ಹಾನಿಯಾದರೆ ನಾವು ಜವಾಬ್ದಾರರಲ್ಲ. ಇಂತಹ ಘಟನೆಗೆ ಅವಕಾಶ ನೀಡಬಾರದು ಎಂದರು.

ಖಾಸಗಿ ಬಸ್ ಚಾಲಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಂದು ನಮಗಾದ ಅನ್ಯಾಯ ನಾಳೆ ನಿಮಗೂ ಆಗುತ್ತದೆ. ದಯವಿಟ್ಟು ಖಾಸಗಿ ವಾಹನ ಚಾಲಕರು ನಾಳೆ ಸಂಚಾರಕ್ಕೆ ಮುಂದಾಗಬಾರದು ನಮ್ಮ ಹೋರಾಟಕ್ಕೆ ಸಹಕಾರ ನೀಡಬೇಕು ಇಲ್ಲವಾದಲ್ಲಿ ಮುಂದಾಗುವ ಘಟನೆಗಳಿಗೆ ನೀವೇ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button