Kannada NewsKarnataka NewsLatest

ನಾಳೆ ಪಂಚಮಸಾಲಿ ಸಮಾಜದ ಸಮುದಾಯ ಭವನ ಭೂಮಿಪೂಜೆ

ಪ್ರಗತಿವಾಹಿನಿ ಸುದ್ದಿ, ಅಥಣಿ : ಅಥಣಿ ಪಟ್ಟಣದಲ್ಲಿ ದಿನಾಂಕ ೧೬ರಂದು ಪಂಚಮಸಾಲಿ ಸಮಾಜದ ಸಮುದಾಯ ಭವನ ಭೂಮಿಪೂಜೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೇರವೇರಲಿದ್ದು ಪಂಚಮಸಾಲಿ ಸಮಾಜದ ಬಹುದಿನದ ಕನಸು ನನಸಾಗುತ್ತಿದೆ ಎಂದು ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕನಕನಗರದಲ್ಲಿ ಅಥಣಿ ತಾಲೂಕಾ ಪಂಚಮಸಾಲಿ ಸಮಾಜದ ಸಮುದಾಯ ಭವನದ ಭೂಮಿಪೂಜೆ ಕಾರ್ಯಕ್ರಮದ ಸಿದ್ಧತೆಗಳನ್ನು  ಸ್ವಾಮಿಗಳು ವಿಕ್ಷಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದ ಪಂಚಮಸಾಲಿ ಸಮಾಜ ಹೆಮ್ಮೆ ಪಡುವಂತಹ ಸುದಿನ. ಹಲವಾರು ವರ್ಷಗಳಿಂದ ಈ ಜಾಗದಲ್ಲಿ ಒಂದು ಸಮುದಾಯ ಭವನ ಹಾಗೂ ಬಡಮಕ್ಕಳಿಗೆ ಉಚಿತ ವಿದ್ಯಾರ್ಥಿ ನಿಲಯ ಹಾಗೂ ಪ್ರಸಾದ ನಿಲಯ ಆಗಬೇಕೆಂಬ ಕನಸು ಇತ್ತು. ಇಂದು ನೆರವೇರುತ್ತಿರುವುದು ಸಂತಸದ ಸಂಗತಿಯಾಗಿದೆ. ಅಥಣಿ ತಾಲೂಕಿನ ಅಷ್ಟೇ ಅಲ್ಲದೆ ಅನ್ಯ ಭಾಗಗಳ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಬೇಕೆಂದು ಕರೆ ನೀಡಿದರು.

ನಾಡಿನ ವಿವಿಧ ಮಠಾಧೀಶರು, ಎಲ್ಲಾ ಪಕ್ಷಗಳ ರಾಜಕೀಯ ನಾಯಕರು, ಸಮಾಜ ಭಾಂದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು. ಈಗಾಗಲೇ ಬೃಹತ್ ವೇದಿಕೆ, ಮಂಟಪ, ಆಸನ ವ್ಯವಸ್ಥೆ, ಧ್ವನಿವ್ಯವಸ್ಥೆ , ಪ್ರಸಾದ ವ್ಯವಸ್ಥೆ ಹಲವಾರು ವ್ಯವಸ್ಥೆ ಕಂಡು ಅವರು ತೃಪ್ತಿ ವ್ಯಕ್ತಪಡಿಸಿದರು.
ಈ ವೇಳೆ ಕಕಮರಿ ರಾಯಲಿಂಗೇಶ್ವರ ಸಂಸ್ಥಾನಮಠದ ಅಭಿನವ ಗುರುಲಿಂಗಜಂಗಮ ಮಹಾಸ್ವಾಮಿಗಳು, ಮೂರ್ತಿ ಆನಂದ ಸ್ವಾಮೀಜಿ ಕನಕಪೂರ, ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅವರಾದಿ, ಅಥಣಿ ಪಂಚಮಸಾಲಿ ಸಮಾಜದ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ರಮೇಶಗೌಡ ಪಾಟೀಲ, ಸಮಾಜದ ಮುಖಂಡ ಧರೆಪ್ಪ ಠಕ್ಕಣ್ಣವರ, ಸಮಾಜದ ನಿಯೊಜಿತ ಅಧ್ಯಕ್ಷ ಅವಿನಾಶ ನಾಯಿಕ, ಯುವ ಘಟಕದ ತಾಲೂಕಾ ಅಧ್ಯಕ್ಷ ಪರಶುರಾಮ ನಂದೇಶ್ವರ, ನಗರಾಧ್ಯಕ್ಷ ಸುನೀಲಗೌಡ ಶಂಕರಗೌಡ ಪಾಟೀಲ, ಪ್ರಕಾಶ ಪಾಟೀಲ, ಚಿದಾನಂದ ಪಾಟೀಲ, ರಾಜು ಗುಡ್ಡೊಡಗಿ, ಸುನೀಲ ಪಾಟೀಲ, ರಾಜಶೇಖರ ಅರಗೊಡ್ಡಿ, ಸಂತೊಷ ಪಾಟೀಲ, ಶಿವು ಸಂಖ, ಜಗದೀಶ ಕೊಪ್ಪ, ರಾಜು ಜಮಖಂಡಿಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button