Latest

ಹಾಲಿ ಸಭಾಪತಿಗೆ ರಾಜೀನಾಮೆ ಬಿಸಾಕಲು ಹೇಳಿ; ಸಿಎಂ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಉಪಸಭಾಪತಿ ಎಳೆದಾಡಿದ್ದು ಕಪ್ಪು ಚುಕ್ಕೆ. ದೇಶದ ಇತಿಹಾಸದಲ್ಲೇ ಇದು ಮೊದಲ ಘಟನೆ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರುತ್ತದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ಹಾಲಿ ಸಭಾಪತಿಗೆ ಜೆಡಿಎಸ್ ಬೆಂಬಲವಿಲ್ಲ. ಜೆಡಿಎಸ್ ಬಹಿರಂಗವಾಗಿ ಅವಿಶ್ವಾಸ ನಿರ್ಣಯ ಬೆಂಬಲಿಸಿದೆ. ಹೀಗಾಗಿ ಕಾಂಗ್ರೆಸ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕು. ಒಮ್ಮೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನೋಟೀಸ್ ನೀಡಿದರೆ ಸಭಾಪತಿಗೆ ಆ ಸ್ಥಾನದಲ್ಲಿ ಕೂರಲು ಅರ್ಹತೆ ಇಲ್ಲ. ಇದು ಇಡೀ ಜಗತ್ತಿಗೆ ಗೊತ್ತಿರುವ ವಿಷಯ. ಕಾಂಗ್ರೆಸ್ ನವರು ಮೊದಲು ಸಭಾಪತಿಗೆ ರಾಜೀನಾಮೆ ಬಿಸಾಕಲು ಹೇಳಲಿ ಎಂದರು..

ಉಪಸಭಾಪತಿಯನ್ನು ಕೂರಿಸುವುದಾಗಿ ನಾವು ನಿನ್ನೆಯೇ ಬಹಿರಂಗವಾಗಿ ಹೇಳಿದ್ದೆವೆ. ಬೆಲ್ ಆದ್ ಮೇಲೆ ಬಂದರು, ಮೊದಲು ಬಂದರು ಎಂಬುದು ಮುಖ್ಯವಲ್ಲ. ಬಹುಮತವಿಲ್ಲ ಎಂಬುದು ಮುಖ್ಯ. ಉಪಸಭಾಪತಿಯನ್ನು ಎಳೆದಾಡಿದ ಘಟನೆ ದೇಶದ ಇತಿಹಾಸದಲ್ಲೇ ಮೊದಲು. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button