ಅಂತರ್ರಾಜ್ಯ ಕುಖ್ಯಾತ ಕಳ್ಳರ ಬಂಧನ; ೫೧,೬೦,೦೦೦ ರೂ. ಮೌಲ್ಯದ ಬಂಗಾರದ ಆಭರಣ, ಕಾರ್ ಹಾಗೂ ಕಂಟ್ರಿ ಪಿಸ್ತೂಲ್ ವಶಕ್ಕೆ
ದಿನಾಂಕಃ ೦೬-೧೨-೨೦೨೦ ರಂದು ಝಾಡಶಹಾಪೂರ ಗ್ರಾಮದಲ್ಲಿ ಮನೆಕಳ್ಳತನ ಮಾಡುವಾಗ ಸಿಕ್ಕ ಆರೋಪಿತರಾದ ಪ್ರಕಾಶ ವಿನಾಯಕ ಪಾಟೀಲ (೩೦)( ಸಾ|| ಸರಸ್ವತಿ ನಗರ, ಶಹಾಪೂರ ಬೆಳಗಾವಿ ಹಾಲಿ: ಜರಿವಾಡಾ ಸಾಕಳಿ ಗೋವಾ) ಹಾಗೂ ನಿತೈ ಖಾಲಿಪದ ಮಂಡಲ (೪೧) (ಸಾ: ಕಾಲಿತಲಾ, ತಾ:ಜಿ: ಎನ್ ೨೪ ಪರ್ಗಾನಸ್, ರಾಜ್ಯ: ವೆಸ್ಟ್ ಬೆಂಗಾಲ) ಇವರನ್ನು ವಶಕ್ಕೆ ಪಡೆದುಕೊಂಡು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿತರನ್ನು ಕೂಲಂಕಷವಾಗಿ ವಿಚಾರಣೆಗೊಳಪಡಿಸಿದಾಗ ಬೆಳಗಾವಿ ಗ್ರಾಮೀಣ, ಎಪಿಎಮ್ಸಿ, ಕ್ಯಾಂಪ್, ಮಾರಿಹಾಳ, ಮಾಳಮಾರುತಿ ಪೊಲೀಸ್ ಠಾಣಾ ಹದ್ದಿಗಳಲ್ಲಿ ಹಲವಾರು ಹಗಲು ಮನೆಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ.
ಅವರಿಂದ ರೂ. ೨,೪೦,೦೦೦ ಮೌಲ್ಯದ ೮೪೮ ಗ್ರಾಂ. ಬಂಗಾರದ ಆಭರಣಗಳು ರೂ. ೬೦,೦೦೦ ಮೌಲ್ಯದ ಕಂಟ್ರಿ ಪಿಸ್ತೂಲ್ ಮತ್ತು ೫ ಜೀವಂತ ಗುಂಡುಗಳು ಹಾಗೂ ಕಳ್ಳತನಕ್ಕೆ ಬಳಸಿದ ರೂ.೮,೦೦,೦೦೦ ಮೌಲ್ಯದ ಹುಂಡೈ ಕ್ರೇಟಾ ಕಾರ್ ಒಂದು ಹೀಗೆ ಒಟ್ಟು ಒಟ್ಟು ರೂ.೫೧,೬೦,೦೦೦/- ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಪ್ರಕರಣದ ಪತ್ತೆ ಕುರಿತು ಜಿ. ವಾಯ್. ಗುಡಾಜಿ (ಎಸಿಪಿ ಬೆಳಗಾವಿ ಗ್ರಾಮೀಣ ಉಪವಿಭಾಗ) ಮಾರ್ಗದರ್ಶನದಲ್ಲಿ ಸುನೀಲಕುಮಾರ ನಂದೇಶ್ವರ (ಪಿಐ ಬೆಳಗಾವಿ ಗ್ರಾಮೀಣ) ನೇತೃತ್ವದಲ್ಲಿ ಆನಂದ ಆದಗೊಂಡ ಪಿಎಸ್ಐ (ಕಾ&ಸು) ಹಾಗೂ ಸಿಬ್ಬಂದಿ ಜನರಾದ ಬಿ. ಎ. ಚೌಗಲಾ, ವಾಯ್. ವಾಯ್. ತಳೇವಾಡ, ಸಿ. ಎಮ್. ಹುಣಚ್ಯಾಳ, ಎಮ್. ಎಸ್. ಗಾಡವಿ, ಎನ್. ಎಮ್. ಚಿಪ್ಪಲಕಟ್ಟಿ, ಜಿ. ವಾಯ್. ಪೂಜಾರ, ಎಸ್. ಎಮ್. ಲೋಕುರೆ ಪಾಲ್ಗೊಂಡಿದ್ದರು.
ಟಿಳಕವಾಡಿ ಪೊಲೀಸ್ರಿಂದ ವಾಹನ ಕಳ್ಳನ ಬಂಧನ; ೨ ಲಕ್ಷ ಮೌಲ್ಯದ ಒಟ್ಟು ೭ ವಾಹನಗಳು ಜಪ್ತಿ
ದಿನಾಂಕ: ೧೯-೧೧-೨೦೨೦ ರಂದು ತಿಲಕವಾಡಿ ಎಸ್.ವಿ.ಕಾಲನಿ, ಅರ್ಜುನ ಎಂಪೈರದ ಮುಂದೆ ನಿಲ್ಲಿಸಿದ ತಮ್ಮ ಸ್ಕೂಟರ ನಂಬರ್ ಕೆಎ-೨೨/ಎಚ್ಇ-೫೮೬೪ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಮೋನೇಶ ಸಂಜು ತಿಳವಿ (೨೩) (ಸಾ: ಬಸವಣ ಕುಡಚಿ ಬೆಳಗಾವಿ) ಇವರು ನೀಡದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಇಂದು ದಿನಾಂಕ ೧೭-೧೨-೨೦೨೦ ರಂದು ಸಂಶಯುಕ್ತ ಆರೋಪಿತನಾದ ದೀಪಕ ದೇಮಾಣಿ ಲೋಹಾರ (೨೨) (ಸಾ: ಲಕ್ಷ್ಮೀ ಗಲ್ಲಿ, ಸಂತಿ ಬಸ್ತವಾಡ, ಬೆಳಗಾವಿ ಹಾಲಿ: ಕಂಗ್ರಾಳಿ ಕೆಎಚ್ ರಾಮನಗರ ೩ ನೇ ಕ್ರಾಸ್) ಈತನನ್ನು ವಶಕ್ಕೆ ಪಡೆದುಕೊಂಡು ಕೂಲಂಕಷ ವಿಚಾರಣೆ ಮಾಡಿದಾಗ ಆತ ಬೆಳಗಾವಿ ನಗರದಲ್ಲಿ ರೂ.೨ ಲಕ್ಷ ಮೌಲ್ಯದ ಒಟ್ಟು ೭ ದ್ವಿ-ಚಕ್ರ ವಾಹನಗಳನ್ನು ಕಳುವು ಮಾಡಿರುವುದಾಗಿ ಒಪ್ಪಿಕೊಂಡು ಅವುಗಳನ್ನು ತೋರಿಸಿದಂತೆ ಜಪ್ತ ಪಡಿಸಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ