Latest

ಸುರೇಶ್ ಅಂಗಡಿ ಸಮಾಧಿ ಸ್ಥಳ, ವೀರಶೈವ ಲಿಂಗಾಯತ ರುದ್ರಭೂಮಿ ನಿರ್ಮಾಣ ಕಾರ್ಯಗಳ ಕುರಿತು ಚರ್ಚೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಅವರ ಕಛೇರಿಗೆ ಭೇಟಿ ನೀಡಿದ್ದ ಮಹೇಶ್ ಕೋಳಿವಾಡ್, ಶ್ರೀಕಂಠ ಚೌಕಿಮಠ್ ವೀರಶೈವ ಲಿಂಗಾಯತ ರುದ್ರಭೂಮಿ ಕಮಿಟಿ ಸದಸ್ಯರು ಹಾಗೂ ಕಿರಿಯ ಅಭಿಯಂತರ ಶರತ್ ಅವರೊಂದಿಗೆ, ದಿವಂಗತ ಸುರೇಶ್ ಅಂಗಡಿ ಅವರ ಸಮಾಧಿ ಸ್ಥಳ, ವೀರಶೈವ ಲಿಂಗಾಯತ ರುದ್ರಭೂಮಿ ನಿರ್ಮಾಣ ಕಾರ್ಯ ಹಾಗೂ ಶರಣ ಪರಿಷತ್ ಆಗು – ಹೋಗುಗಳ ಕುರಿತು ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು ದೆಹಲಿ ಅಭಿವೃದ್ಧಿ ಪ್ರಾಧಿಕಾರ ವೀರಶೈವ ಲಿಂಗಾಯತ ರುದ್ರಭೂಮಿಗೆ ಅನುಮತಿ ನೀಡಿರುವುದು ನಮ್ಮ 20 ವರ್ಷಗಳ ಪ್ರಯತ್ನ- ಪರಿಶ್ರಮಕ್ಕೆ ಸಿಕ್ಕ ಫಲವಾಗಿದೆ. ಸುರೇಶ್ ಅಂಗಡಿ ಅವರ ಸಮಾಧಿ ಸ್ಥಳ ನಿರ್ಮಾಣಕ್ಕೆ ಇರುವ ತೊಡಕುಗಳನ್ನು ಪ್ರಾಧಿಕಾರದೊಂದಿಗೆ ಸಮಾಲೋಚಿಸಿ, ಅತಿ ಶೀಘ್ರದಲ್ಲಿ ರುದ್ರಭೂಮಿ ಮತ್ತು ಸಮಾಧಿ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಸೂಚನೆ ನೀಡಿದರು ಮತ್ತು ನಾಳೆಯಿಂದ ವೀರಶೈವ ಲಿಂಗಾಯತ ರುದ್ರ ಭೂಮಿಯ ಜಾಗದಲ್ಲಿ ಕಾಂಪೌಂಡ್ ಗೋಡೆ ಮತ್ತು ಗೇಟ್ ನಿರ್ಮಾಣ ಮಾಡಲು ತಿಳಿಸಿದರು

ದೆಹಲಿಯಲ್ಲಿರುವ ಲಿಂಗಾಯತ ವೀರಶೈವರನ್ನು ಒಟ್ಟಾಗಿ ಸೇರಿಸಿ ಸಂಪರ್ಕ-ಒಡನಾಟ ಹೆಚ್ಚಿಸುವ ಕಾರ್ಯಕ್ರಮಗಳನ್ನು ‘ಶರಣ ಪರಿಷತ್’ ಮೂಲಕ ರೂಪಿಸುವಂತೆ ಸೂಚಿಸಿದರು.

Home add -Advt

Related Articles

Back to top button